ಗುರುವಾರ , ಫೆಬ್ರವರಿ 25, 2021
31 °C

ಚಿನ್ನದ ಬೇಡಿಕೆ ಹೆಚ್ಚುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನದ ಬೇಡಿಕೆ ಹೆಚ್ಚುವ ನಿರೀಕ್ಷೆ

ಮುಂಬೈ (ಪಿಟಿಐ): ಸಾಲು ಸಾಲು ಹಬ್ಬಗಳು ಬರುವುದರಿಂದ ಮತ್ತು ಏಳನೇ ವೇತನ ಆಯೋಗ ಜಾರಿಯಿಂದಾಗಿ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಹಳದಿ ಲೋಹಕ್ಕೆ ಹೆಚ್ಚು ಬೇಡಿಕೆ ಸೃಷ್ಟಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.ಅನಧಿಕೃತ ಆಮದು, ಅಬಕಾರಿ ಸುಂಕ ಮತ್ತು ಚಿನ್ನಾಭರಣ ವರ್ತಕರ ನಿರಂತರ ಮುಷ್ಕರದಿಂದ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ  ಚಿನ್ನದ ಬೇಡಿಕೆ ತಗ್ಗಿತ್ತು ಎಂದಿದ್ದಾರೆ.ಒಟ್ಟಾರೆ ಬೇಡಿಕೆಯು 380 ರಿಂದ 400 ಟನ್‌ಗಳಷ್ಟಿರುವ ಅಂದಾಜು ಮಾಡಲಾಗಿದೆ. ಏಳನೇ ವೇತನ ಆಯೋಗದಡಿ ಸರ್ಕಾರಿ ನೌಕರರಿಗೆ ಹೆಚ್ಚಿನ ವೇತನ ಮತ್ತು ಭತ್ಯೆ, ರೈತರ ಆದಾಯದಲ್ಲಿ ಹೆಚ್ಚಳದ ಕಾರಣಗಳಿಂದ ಚಿನ್ನ ಖರೀದಿ ಪ್ರಮಾಣದಲ್ಲಿಯೂ ಏರಿಕೆ ಕಂಡುಬರಲಿದೆ ಎಂದು ಫೋರ್ಟೆಲ್‌ ಬಿಸಿನೆಸ್‌ ಸಲ್ಯೂಷನ್ಸ್‌ನ ಚಿನ್ನ ಸಂಶೋಧನೆಯ ಮುಖ್ಯಸ್ಥ  ದೇಬಜಿತ್‌ ಸಹಾ ಹೇಳಿದ್ದಾರೆ.ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಚಿನ್ನದ ಬೆಲೆ ಪ್ರತಿ ₹10 ಗ್ರಾಂಗಳಿಗೆ ₹29 ಸಾವಿರಕ್ಕೆ ಇಳಿಯಲಿದ್ದು, ನಂತರ ₹33,500ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಥಾಮ್ಸನ್‌ ರಾಯಿಟರ್ಸ್‌ ಜಿಎಫ್‌ಎಂಎಸ್‌ನ ಸುದೀಶ್‌ ನಂಬಿಯಾತ್‌ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.