ಶನಿವಾರ, ಮೇ 15, 2021
24 °C

ಚಿನ್ನಸ್ವಾಮಿ ಅಂಗಳದಲ್ಲಿ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಂದ್ಯದ ಆರಂಭಕ್ಕೆ ಎದುರು ನೋಡುತ್ತಿದ್ದ ಪ್ರೇಕ್ಷಕರು ಒಮ್ಮೆಲೇ ಗಾಬರಿಗೆ ಒಳಗಾದರು. ಕ್ರೀಡಾಂಗಣದಲ್ಲಿದ್ದ ಆಟಗಾರರು ಆತಂಕದಿಂದಲೇ ಪೆವಿಲಿಯನ್‌ನತ್ತ ಓಡಲು ಶುರು ಮಾಡಿದರು. ಇದಕ್ಕೆ ಕಾರಣ ಬೌಂಡರಿ ಬಳಿ ಕಾಣಿಸಿಕೊಂಡ ಬೆಂಕಿ.ರಾಯಲ್ ಚಾಲೆಂಜರ್ಸ್  ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯಕ್ಕೂ ಮುನ್ನ ಮಂಗಳವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಹಾಗಾಗಿ ಪಂದ್ಯ 20 ನಿಮಿಷ ತಡವಾಗಿ ಆರಂಭವಾಯಿತು.ಟಾಸ್ ಗೆದ್ದು ಫೀಲ್ಡಿಂಗ್‌ಗೆ ಮುಂದಾಗಿದ್ದ ಆರ್‌ಸಿಬಿ ಆಟಗಾರರು ಕ್ರೀಡಾಂಗಣಕ್ಕೆ ಇಳಿದಿದ್ದರು. ಆಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಚಿಯರ್ ಲೀಡರ್ಸ್ ನೃತ್ಯ ಮಾಡುವ ಸ್ಟ್ಯಾಂಡ್ ಬಳಿ (ಕ್ಲಬ್ ಹೌಸ್ ಎದುರು) ಈ ಅವಘಡ ಸಂಭವಿಸಿತು. `ಜಾಹೀರಾತು ಫಲಕದ ಮೇಲೆ ಲೋಹವಿದ್ದ ಚೀಲ ಇಟ್ಟ್ದ್ದಿದು ಈ ಎಡವಟ್ಟಿಗೆ ಕಾರಣ. ಹಾಗಾಗಿ ಪಂದ್ಯ ತಡವಾಯಿತು~ ಎಂದು ಸಂಘಟಕರು ಹೇಳಿದರು.ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅನಿಲ್ ಕುಂಬ್ಳೆ ಸಿಟ್ಟಿನಿಂದಲೇ ಸ್ಥಳಕ್ಕೆ ಧಾವಿಸಿ ಬಂದರು. ಆರ್‌ಸಿಬಿ ಮಾಲೀಕ ವಿಜಯ್ ಮಲ್ಯ ಅವರ ಜೊತೆಗಿದ್ದರು. ತಕ್ಷಣವೇ ಕ್ರೀಡಾಂಗಣದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. 4 ಮೀಟರ್ ಉದ್ದದ ಕೇಬಲ್ ಸುಟ್ಟು ಹೋಯಿತು.  ಸಣ್ಣಗೆ ಶಬ್ದವೂ ಕೇಳಿಬಂತು. ದಟ್ಟ ಹೊಗೆ ಆವರಿಸಿಕೊಂಡಿತು. ಯಾವುದೇ ಅಪಾಯ ಸಂಭವಿಸಲಿಲ್ಲ. ಆದರೆ ವಿದ್ಯುತ್ ಜಾಹೀರಾತು ಫಲಕ ಕೈಕೊಟ್ಟಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.