ಚಿನ್ನಾಭರಣ ಮಳಿಗೆಗೆ ನುಗ್ಗಿ ದಾಂಧಲೆ

7

ಚಿನ್ನಾಭರಣ ಮಳಿಗೆಗೆ ನುಗ್ಗಿ ದಾಂಧಲೆ

Published:
Updated:

ಬೆಂಗಳೂರು: ಕುಖ್ಯಾತ ರೌಡಿ ಬ್ರಿಗೆಡ್ ಅಜಂ ಮತ್ತು ಆತನ 15 ಮಂದಿ ಸಹಚರರು ಕೋಲ್ಸ್ ಪಾರ್ಕ್‌ನಲ್ಲಿರುವ ಚಿನ್ನಾಭರಣ ಮಳಿಗೆಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಘಟನೆ ಸಂಬಂಧ ಮಳಿಗೆ ಮಾಲೀಕ ಸಾದಿಕ್ ಪಾಷಾ ಭಾರತಿನಗರ ಠಾಣೆಗೆ ದೂರು ಕೊಟ್ಟಿದ್ದಾರೆ. `ಅಜಂ, ಕಳೆದ ಮೂರು ದಿನಗಳಿಂದ ನನ್ನ ಮೊಬೈಲ್‌ಗೆ ಕರೆ ಮಾಡಿ ಹಫ್ತಾ ನೀಡುವಂತೆ ಬೆದರಿಕೆ ಹಾಕುತ್ತಿದ್ದ. ಆದರೆ, ನಾನು ಹಫ್ತಾ ನೀಡಲು ನಿರಾಕರಿಸಿದ್ದೆ. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಅಜಂ ಸೇರಿದಂತೆ ಸುಮಾರು 15 ಮಂದಿ ಆತನ ಸಹಚರರು ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದರು.ಈ ವೇಳೆ ಮಳಿಗೆಯಲ್ಲಿದ್ದ ನೌಕರರು ಹಾಗೂ ಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದಲ್ಲದೇ, 25 ಲಕ್ಷ ರೂಪಾಯಿ ಮೌಲ್ಯದ ಆಭರಣ ದೋಚಿ ಪರಾರಿಯಾದರು' ಎಂದು ಸಾದಿಕ್ ದೂರಿದ್ದಾರೆ.ಭಾರತಿನಗರ ಮತ್ತು ಫ್ರೇಜರ್‌ಟೌನ್ ಠಾಣೆಯ ರೌಡಿಗಳ ಪಟ್ಟಿಯಲ್ಲಿ ಅಜಂನ ಹೆಸರಿದೆ. ಜತೆಗೆ ಆತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಭಾರತಿನಗರ ಠಾಣೆ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry