ಶುಕ್ರವಾರ, ಜೂನ್ 18, 2021
23 °C

ಚಿನ್ನಾಭರಣ ವ್ಯಾಪಾರಿಗಳ ಪ್ರತಿಭಟನೆ, ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಕೇಂದ್ರ ಸರ್ಕಾರ ಈ ಬಾರಿಯ ಆಯವ್ಯಯದಲ್ಲಿ ಚಿನ್ನಾಭರಣಗಳ ವ್ಯಾಪಾರಿಗಳ ಮೇಲೆ ಹೆಚ್ಚುವರಿಯಾಗಿ ಸುಂಕ ವಿಧಿಸುವ ಮೂಲಕ ಗ್ರಾಹಕರ ಬೆಲೆ ಏರಿಕೆಯ ಗಾಯಕ್ಕೆ ಬರೆ ನೀಡಿದಂತಾಗಿದೆ ಎಂದು ಚಿನ್ನಾಭರಣ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿ ಸುಂಕ ಕಡಿಮೆಗೊಳಿಸಲು ಆಗ್ರಹಿಸಿದ್ದಾರೆ.

 

ದೇಶವ್ಯಾಪಿ ಕರೆ ನೀಡಿರುವ ಬಂದ್‌ನಂತೆ ಕಳೆದೆರಡು ದಿನಗಳಿಂದ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿರುವ ವ್ಯಾಪಾರಿಗಳು ಸೋಮವಾರ ಹೊಸಪೇಟೆ ಚಿನ್ನಾಭರಣ ಮತ್ತು ಪಾನ್ ಬ್ರೋಕರ್ಸ್‌ ಅಸೋಸಿಯೇಷನ್ ಹಾಗೂ ಚಿನ್ನಾಭರಣ ಕೆಲಸಗಾರರ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿಭಟನಾ ರ‌್ಯಾಲಿ ನಡೆಸಿ ತಮ್ಮ ಬೇಡಿಕೆಗಳ ಮನವಿಯನ್ನು ಹೊಸಪೇಟೆ ತಹಶೀಲ್ದಾರರ ಮೂಲಕ ಪ್ರಧಾನಿಗಳಿಗೆ ಸಲ್ಲಿಸಿದರು.ಬೆಳಿಗ್ಗೆ ವಡಕರಾಯಸ್ವಾಮಿ ದೇವಸ್ಥಾನದಿಂದ ಆರಂಭವಾದ ರ‌್ಯಾಲಿಯಲ್ಲಿ ಅಧ್ಯಕ್ಷ ಸೋನಿ ಚಂಪಾಲಾಲ್, ವಿಲಾಸ್ ರೇವಣಕರ್, ವಸ್ತಿಮಲ್, ಜೈನ್ ಆರ್.ಡಿ. ಸೋನಿ, ಮಂಜುನಾಥ ಸೇರಿದಂತೆ ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.ಚಿನ್ನಾಭರಣಗಳ ಮೇಲೆ ಹಾಕಿರುವ ಹೆಚ್ಚುವರಿ ಸುಂಕ ಅಕ್ರಮ ವಹಿವಾಟಿಗೆ ಪ್ರಚೋದನೆ ನೀಡಿದಂತಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಗ್ರಾಹಕನಿಗೆ ಹೊರೆಯಾಗಲಿದ್ದು ಮಧ್ಯಮ ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳು ವೃತ್ತಿಬಿಡುವ ಸಾಧ್ಯತೆಗಳಿಗೆ ಕಾರಣವಾಗಲಿದೆ. ತಕ್ಷಣವೇ ಸುಂಕ ವಾಪಸ್ ಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಿದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.