ಶುಕ್ರವಾರ, ನವೆಂಬರ್ 22, 2019
26 °C

ಚಿನ್ನ ಆಮದು ಇಳಿಕೆ ಸಾಧ್ಯತೆ

Published:
Updated:

(ಮುಂಬೈ ವರದಿ): ಚಿನ್ನದ ಆಮದು ಏಪ್ರಿಲ್‌ನಲ್ಲಿ ಶೇ 25ರಷ್ಟು ಕುಸಿತ ಕಾಣಲಿದ್ದು, 53.25 ಟನ್‌ಗಳಿಗೆ ಕುಸಿಯುವ ಸಾಧ್ಯತೆ ಇದೆ ಎಂದು ಮುಂಬೈ ಚಿನ್ನಾಭರಣ ವರ್ತಕರ ಸಂಘ ಹೇಳಿದೆ.2012ನೇ ಸಾಲಿನ ಏಪ್ರಿಲ್‌ನಲ್ಲಿ 71 ಟನ್‌ಗಳಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಆಮದು ಕಡಿಮೆಯಾಗಲಿದೆ. ಬೆಲೆಯಲ್ಲಿ ಸ್ಥಿರತೆ ಕಾಣುತ್ತಿದ್ದಂತೆ ಮತ್ತೆ ಚೇತರಿಕೆ ಕಾಣಬಹುದು ಎಂದು ಸಂಘದ ಅಧ್ಯಕ್ಷ ಮೋಹಿತ್ ಕಂಬೂಜ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಪ್ರಸಕ್ತ ವರ್ಷದ ಮೊದಲ 3 ತಿಂಗಳಲ್ಲಿ ಒಟ್ಟಾರೆ 250 ಟನ್‌ಗಳಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿದೆ.  2012ನೇ ಸಾಲಿನಲ್ಲಿ ಒಟ್ಟು 864 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು.ಷೇರು ಮೌಲ್ಯ ಇಳಿಕೆ

ಮುಂಬೈ (ಪಿಟಿಐ):  ಚಿನ್ನದ ಬೆಲೆ ಕುಸಿಯುತ್ತಿರುವುದರಿಂದ ಮುಂಬೈ ಷೇರುಪೇಟೆಯಲ್ಲಿ  ಚಿನ್ನಾಭರಣ ತಯಾರಿಕಾ ಸಂಸ್ಥೆಗಳು ಮತ್ತು ಚಿನ್ನದ ಸಾಲ ಸಂಸ್ಥೆಗಳ ಷೇರು ಮೌಲ್ಯ ಗರಿಷ್ಠ ಮಟ್ಟದಲ್ಲಿ ಕುಸಿದಿದೆ.

ಪ್ರತಿಕ್ರಿಯಿಸಿ (+)