ಚಿನ್ನ ಆಮದು ಶೇ 20ರಷ್ಟು ಹೆಚ್ಚಳ
ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನ ಮೊದಲ ಆರು ತಿಂಗಳಲ್ಲಿ ಚಿನ್ನದ ಆಮದು 300 ಟನ್ನಷ್ಟಿದ್ದು, 2011ಕ್ಕೆ ಹೋಲಿಸಿದರೆ ಶೇ 20ರಷ್ಟು ಹೆಚ್ಚಳವಾಗಿದೆ ಎಂದು ಚಿನ್ನಾಭರಣ ವರ್ತಕರ ಒಕ್ಕೂಟ ಹೇಳಿದೆ.
ಜಾಗತಿಕ ಆರ್ಥಿಕ ಹಿಂಜರಿತದ ನಂತರ ಹೂಡಿಕೆಗಾಗಿ ಚಿನ್ನದ ಬೇಡಿಕೆ ದ್ವಿಗುಣಗೊಂಡಿದೆ. ಇದರಿಂದ ಚಿನ್ನದ ಧಾರಣೆ 10 ಗ್ರಾಂಗೆ ರೂ.30 ಸಾವಿರದ ಗಡಿ ದಾಟಿದೆ ಎಂದು `ಮುಂಬೈ ಬುಲಿಯನ್ ಅಸೋಸಿಯೇಷನ್~ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಸೋಮವಾರ ಅಭಿಪ್ರಾಯಪಟ್ಟರು.
ಮದುವೆ ಮತ್ತು ಸರಣಿ ಹಬ್ಬಗಳ ಕಾಲ ಆಗಸ್ಟ್ನಿಂದ ಆರಂಭವಾಗಲಿದ್ದು, ಬೆಲೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಮೊದಲ 10 ಗ್ರಾಂ ಚಿನ್ನದ ಆಮದಿಗೆ ರೂ.300 ತೆರಿಗೆ ವಿಧಿಸಲಾಗುತ್ತಿತ್ತು. ಈಗ ಚಿನ್ನದ ಮೌಲ್ಯದ ಶೇ 2ರಷ್ಟನ್ನು ತೆರಿಯಾಗಿ ವಿಧಿಸಲಾಗುತ್ತಿದೆ ಎಂದರು.
ಭಾರತ, ಚಿನ್ನಕ್ಕೆ ಪ್ರಪಂಚದಲ್ಲಿಯೇ ಅತಿ ದೊಡ್ಡ ಗ್ರಾಹಕ ದೇಶವಾಗಿದ್ದು, 2011ರಲ್ಲಿ 1,037 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು ಎಂದು `ವರ್ಲ್ಡ್ ಗೋಲ್ಡ್ ಕೌನ್ಸಿಲ್~ ಹೇಳಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.