ಚಿನ್ನ ಆಮದು ಸುಂಕ ಇಳಿಕೆ

7

ಚಿನ್ನ ಆಮದು ಸುಂಕ ಇಳಿಕೆ

Published:
Updated:

ನವದೆಹಲಿ (ಪಿಟಿಐ):  ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೋಮವಾರ ಚಿನ್ನದ ಆಮದು ಸುಂಕವನ್ನು 10 ಗ್ರಾಂಗಳಿಗೆ 458 ಡಾಲರ್‌ಗಳಿಗೆ ತಗ್ಗಿಸಿದೆ. ಬೆಳ್ಳಿ ಆಮದು ದರ ಕೂಡ ಕೆ.ಜಿಗೆ 783 ಡಾಲರ್‌ಗಳಿಗೆ ಇಳಿದಿದೆ.  ಈ ಮೊದಲು ಚಿನ್ನಕ್ಕೆ 461 ಡಾಲರ್ ಮತ್ತು ಬೆಳ್ಳಿಗೆ 803 ಡಾಲರ್ ಆಮದು ಸುಂಕ ವಿಧಿಸಲಾಗುತ್ತಿತ್ತು.`ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಸತತ ಇಳಿಕೆ ಕಂಡಿದೆ.  ಈ ಹಿನ್ನೆಲೆಯಲ್ಲಿ ಆಮದು ಸುಂಕ ತಗ್ಗಿಸಲಾಗಿದೆ' ಎಂದು ಕೇಂದ್ರ ಅಬಕಾರಿ ಮತ್ತು ಸೀಮಾಸುಂಕ ಮಂಡಳಿ  ಪ್ರಕಟಣೆಯಲ್ಲಿ ತಿಳಿಸಿದೆ.ಕಳೆದ ವಾರಾಂತ್ಯದಲ್ಲಿ ಇಲ್ಲಿನ ಚಿನಿವಾರ ಪೇಟೆಯಲ್ಲಿ ಸ್ಟ್ಯಾಂಡರ್ಡ್ ಚಿನ್ನದ ಧಾರಣೆ 10 ಗ್ರಾಂಗಳಿಗೆ ದಾಖಲೆ ಮಟ್ಟವಾದ ರೂ34,500ಕ್ಕೆ ಏರಿಕೆ ಕಂಡಿತ್ತು. ಆದರೆ, ನಂತರ ರೂ31,000 ಮಟ್ಟಕ್ಕೆ ಕುಸಿತ ಕಂಡಿದೆ.ಸಿಂಗಪುರ ಮಾರುಕಟ್ಟೆಯಲ್ಲಿ ಸಹ ಬಂಗಾರದ ಬೆಲೆ ಸೋಮವಾರ ಶೇ 1.6ರಷ್ಟು ಕುಸಿತ ಕಂಡು 1,373 ಡಾಲರ್‌ಗಳಿಗೆ ಇಳಿಕೆ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry