ಗುರುವಾರ , ಮೇ 13, 2021
16 °C

ಚಿನ್ನ: ದೆಹಲಿಯಲ್ಲಿ ಏರಿಕೆ, ಮುಂಬೈನಲ್ಲಿ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ/ನವದೆಹಲಿ(ಪಿಟಿಐ): ದೇಶದ ಪ್ರಮುಖ ಚಿನಿವಾರ ಪೇಟೆಗಳೆರಡರಲ್ಲೂ ಮಂಗಳವಾರ ಚಿನ್ನದ ಧಾರಣೆ ವಿಚಾರ ದಲ್ಲಿ ಭಿನ್ನ ಪ್ರತಿಕ್ರಿಯೆ. ಮುಂಬೈನಲ್ಲಿ ಚಿನ್ನದ ಧಾರಣೆ   ರೂ30ರಿಂದ 35ರಷ್ಟು ತಗ್ಗಿದರೆ, ನವದೆಹಲಿಯಲ್ಲಿ ರೂ245 ರವರೆಗೂ ಏರಿಕೆಯಾಯಿತು!

ಮುಂಬೈನಲ್ಲಿ 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ30ರಷ್ಟು ಬೆಲೆ ಕಳೆದುಕೊಂಡು ರೂ27,030ಕ್ಕೂ, ಅಪರಂಜಿ ಚಿನ್ನ ರೂ35ರಷ್ಟು ಮೌಲ್ಯ ತಗ್ಗಿಸಿಕೊಂಡು ರೂ27,155ಕ್ಕೂ ಬಂದಿತು. ಸಿದ್ಧ ಬೆಳ್ಳಿ ರೂ250ರಷ್ಟು ಅಗ್ಗವಾಗಿ ಕೆ.ಜಿ.ಗೆ ರೂ45,000ರಲ್ಲಿ ವಹಿವಾಟು ನಡೆಸಿತು.

ವರ್ತಕರು, ಚಿನಿವಾರರು ಚಿನ್ನದ ಖರೀದಿ ಕಡಿಮೆ ಮಾಡಿದ್ದರಿಂದ ಚಿನ್ನ-ಬೆಳ್ಳಿ ಧಾರಣೆ ಏರಿಕೆಗೆ ಧಾರಣೆ ಅಲ್ಪ ಪ್ರಮಾಣದಲ್ಲಿ ತಗ್ಗಿದೆ ಎಂದು ವಿಶ್ಲೇಷಿಸಲಾಗಿದೆ.

ಆದರೆ, ನವದೆಹಲಿ ಚಿನಿವಾರ ಪೇಟೆಯಲ್ಲಿ ಮುಂಬೈಗೆ ವ್ಯತಿರಿಕ್ತವಾದ ಚಟುವಟಿಕೆ ಕಂಡುಬಂದಿತು. ಇಲ್ಲಿ ಮಂಗಳವಾರದ ವಹಿವಾಟು ವೇಳೆ ರೂ245ರಷ್ಟು ಮೌಲ್ಯ ಹೆಚ್ಚಿಸಿಕೊಂಡ 10 ಗ್ರಾಂ ಅಪರಂಜಿ ಚಿನ್ನ ರೂ27,670ರಲ್ಲೂ, ಸ್ಟ್ಯಾಂಡರ್ಡ್ ಚಿನ್ನ ರೂ27,470ಕ್ಕೇ ಏರಿಕೆ ಕಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.