ಮಂಗಳವಾರ, ಮೇ 24, 2022
25 °C

ಚಿನ್ನ ದೆಹಲಿ ರೂ 115, ಮುಂಬೈ ರೂ 80 ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಸಂಗ್ರಹಕಾರರು ಮತ್ತು ವರ್ತಕರಿಂದ ಬೇಡಿಕೆ ತಗ್ಗಿದ ಪರಿಣಾಮ ಚಿನ್ನ ಧಾರಣೆ ಬುಧವಾರ ತುಸು ಇಳಿಮುಖವಾಯಿತು. 10 ಗ್ರಾಂ ಚಿನ್ನ ನವದೆಹಲಿಯಲ್ಲಿರೂ115, ಮುಂಬೈನಲ್ಲಿ ರೂ 80ರಷ್ಟು ಇಳಿಯಿತು. ಸಿದ್ಧ ಬೆಳ್ಳಿ ದೆಹಲಿಯಲ್ಲಿ ರೂ 400ರಷ್ಟು, ಮುಂಬೈನಲ್ಲಿ ರೂ 40ರಷ್ಟು ತಗ್ಗಿತು.

ನವದೆಹಲಿ ಧಾರಣೆ: 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ 26,515ರಲ್ಲೂ, ಅಪರಂಜಿ ಚಿನ್ನ ರೂ 26,715ರಲ್ಲೂ ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ರೂ 40,350ರಲ್ಲಿ ವಹಿವಾಟು ನಡೆಸಿತು. ಮುಂಬೈ ಧಾರಣೆ: 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ 26,210ಕ್ಕೂ, ಅಪರಂಜಿ ಚಿನ್ನ ರೂ 26,430ಕ್ಕೂ ಇಳಿಯಿತು. ಸಿದ್ಧ ಬೆಳ್ಳಿ ಕೆ.ಜಿ.ಗೆ ರೂ 41,010ರಲ್ಲಿ ಮಾರಾಟವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.