ಸೋಮವಾರ, ಜನವರಿ 27, 2020
27 °C

ಚಿನ್ನ, ಬೆಳ್ಳಿ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಶುಕ್ರವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗಳಿಗೆ ರೂ635 ಏರಿಕೆಯಾಗಿದ್ದು, ರೂ27,875ರಷ್ಟಾಗಿದೆ. ಬೆಳ್ಳಿ ಧಾರಣೆಯೂಕೆ.ಜಿಗೆ ರೂ1,520 ಹೆಚ್ಚಿದ್ದು, ರೂ56,060ರಷ್ಟಾಗಿದೆ.ಡಾಲರ್ ಮೌಲ್ಯ ಕುಸಿತದ ಜತೆಗೆ ಅಮೆರಿಕದ ಕೇಂದ್ರೀಯ ಬ್ಯಾಂಕ್, 2014ರ ಅಂತ್ಯದ ವರೆಗೆ ಬಡ್ಡಿ ದರಗಳನ್ನು ಶೂನ್ಯದ ಹತ್ತಿರ ಇರಿಸಲಿದೆ ಎನ್ನುವ ವರದಿಯಿಂದ ಸಾಗರೋತ್ತರ ಮಾರುಕಟ್ಟೆಯಲ್ಲೂ ಚಿನ್ನದ ಬೇಡಿಕೆ ಹೆಚ್ಚಿದೆ.ಶುಕ್ರವಾರ ಪ್ರತಿ ಔನ್ಸ್ ಚಿನ್ನಕ್ಕೆ 26 ಡಾಲರ್ (ರೂ1,300) ಏರಿಕೆಯಾಗಿದೆ.  ಮುಂಬೈ ಮಾರುಕಟ್ಟೆಯಲ್ಲಿ 99.5 ಮತ್ತು 99.9 ಶುದ್ಧತೆ ಚಿನ್ನದ ಬೆಲೆ ಕ್ರಮವಾಗಿ ರೂ27,875 ಮತ್ತು ರೂ27,240 ರಷ್ಟಾಗಿದೆ.

ಪ್ರತಿಕ್ರಿಯಿಸಿ (+)