ಬುಧವಾರ, ಏಪ್ರಿಲ್ 14, 2021
23 °C

ಚಿನ್ನ-ಬೆಳ್ಳಿ ತಗ್ಗಿದ ಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ/ನವದೆಹಲಿ(ಪಿಟಿಐ): ಬಂಗಾರದ ಬೆಲೆ ಬುಧವಾರ ದೇಶದ  ಚಿನಿವಾರ ಪೇಟೆಯಲ್ಲಿ ರೂ275ರಿಂದ ರೂ300ರವರೆಗೂ ತಗ್ಗಿತು.



ಮುಂಬೈ ಪೇಟೆಯಲ್ಲಿ 10 ಗ್ರಾಂ ಸ್ಟಾಂಡರ್ಡ್ ಚಿನ್ನ ಮಂಗಳವಾರ ರೂ29,475ರಷ್ಟು ಇದ್ದುದು ಬುಧವಾರ ರೂ29,200ಕ್ಕೆ ಇಳಿಯಿತು. ಶುದ್ಧ ಚಿನ್ನವೂ ರೂ29600ರಿಂದ ರೂ29,325ಕ್ಕೆ ತಗ್ಗಿತು. ಅಂದರೆ, ರೂ275ರಷ್ಟು ಬೆಲೆ ಕಡಿಮೆ ಆಗಿದೆ.



ನವದೆಹಲಿಯಲ್ಲಿಯೂ ಚಿನ್ನದ ಧಾರಣೆ ರೂ300ರಷ್ಟು ಕಡಿಮೆ ಆಯಿತು. 10 ಗ್ರಾಂ ಸ್ಟಾಂಡರ್ಡ್ ಚಿನ್ನ ರೂ29,400ರಲ್ಲಿಯೂ ಶುದ್ಧ ಚಿನ್ನ ರೂ29,600ರಲ್ಲಿಯೂ ಮಾರಾಟವಾಯಿತು.



ಸಿದ್ಧ ಬೆಳ್ಳಿ ಬೆಲೆ ಕೆ.ಜಿ.ಗೆ ಮುಂಬೈನಲ್ಲಿ ರೂ540ರಷ್ಟು ಇಳಿದರೆ(ರೂ52,670), ನವದೆಹಲಿಯಲ್ಲಿ ಮಾತ್ರ ರೂ800ರವರೆಗೂ(ರೂ52,200) ತಗ್ಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.