ಸೋಮವಾರ, ನವೆಂಬರ್ 18, 2019
29 °C

ಚಿನ್ನ, ಬೆಳ್ಳಿ ತುಟ್ಟಿ

Published:
Updated:

ಮುಂಬೈ (ಪಿಟಿಐ): ಕಳೆದ ಮೂರು ದಿನಗಳಲ್ಲಿ ಸತತ ಕುಸಿತ ಕಂಡು 10 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದ್ದ ಚಿನ್ನ ಮತ್ತು ಬೆಳ್ಳಿ ಧಾರಣೆ  ಶನಿವಾರ ಮತ್ತೆ ಏರಿಕೆ ಕಂಡಿದೆ. ಸ್ಟಾಂಡರ್ಡ್ ಚಿನ್ನದ ಬೆಲೆ 10 ಗ್ರಾಂಗಳಿಗೆ ಇಲ್ಲಿರೂ 410 ಏರಿಕೆಯಾಗಿದ್ದುರೂ29,510 ತಲುಪಿದೆ.ಬೆಳ್ಳಿ ಧಾರಣೆ ಕೂಡ ಕೆ.ಜಿಗೆರೂ465 ಹೆಚ್ಚಿದ್ದುರೂ52,532ರಷ್ಟಾಗಿದೆ. ನವದೆಹಲಿಯಲ್ಲಿ ಸ್ಟಾಂಡರ್ಡ್ ಚಿನ್ನದ ಧಾರಣೆ ಶನಿವಾರರೂ470 ಏರಿಕೆ ಪಡೆದುರೂ30 ಸಾವಿರದ ಗಡಿ ದಾಟಿ ರೂ30,030ರಲ್ಲಿ ವಹಿವಾಟು ಕೊನೆಗೊಳಿಸಿತು. ಬೆಳ್ಳಿ ಬೆಲೆ ಕೆ.ಜಿಗೆರೂ800 ಹೆಚ್ಚಿದ್ದುರೂ52,400ರಷ್ಟಾಗಿದೆ.

ಪ್ರತಿಕ್ರಿಯಿಸಿ (+)