ಚಿನ್ನ, ಬೆಳ್ಳಿ ಬೆಲೆ ಹೊಸ ದಾಖಲೆ

7

ಚಿನ್ನ, ಬೆಳ್ಳಿ ಬೆಲೆ ಹೊಸ ದಾಖಲೆ

Published:
Updated:

ಮುಂಬೈ (ಪಿಟಿಐ): ಇಲ್ಲಿಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಗುರುವಾರದ ವಹಿವಾಟಿನಲ್ಲಿ ಹೊಸ ದಾಖಲೆ ಬರೆದವು.ಸಟ್ಟಾ ವ್ಯಾಪಾರಿಗಳ ಮತ್ತು ಸಂಗ್ರಹಕಾರರ ಆಸಕ್ತಿ, ಕೈಗಾರಿಕಾ ರಂಗದ ಬೆಂಬಲದ ಖರೀದಿ ಭರಾಟೆಗೆ  ಜಾಗತಿಕ ವಿದ್ಯಮಾನಗಳು ಇನ್ನಷ್ಟು ನೀರೆರೆದವು. ಹೀಗಾಗಿ ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ      ರೂ 50 ಸಾವಿರದ ಗಡಿ ದಾಟಿದರೆ, ಶುದ್ಧ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗಳಿಗೆ   ರೂ 21 ಸಾವಿರದ ಗಡಿ ದಾಟಿತು.ಬುಧವಾರದ ವಹಿವಾಟಿಗೆ ಹೋಲಿಸಿದರೆ  ಬೆಳ್ಳಿ ಗುರುವಾರ ಪ್ರತಿ ಕೆಜಿಗೆ      ರೂ1,045ರಷ್ಟು ಹೆಚ್ಚಳಗೊಂಡು          ರೂ 50,515ಕ್ಕೆ ಏರಿಕೆಯಾಯಿತು. ಸ್ಟ್ಯಾಂಡರ್ಡ್ ಚಿನ್ನ ಪ್ರತಿ 10 ಗ್ರಾಂಗಳಿಗೆ          ರೂ325ರಷ್ಟು ಹೆಚ್ಚಳಗೊಂಡು  ರೂ20,9 60ಕ್ಕೆ ಕೊನೆಗೊಂಡಿತು. ಶುದ್ಧ ಚಿನ್ನ ಪ್ರತಿ 10 ಗ್ರಾಂಗಳಿಗೆ  ರೂ 330ರಂತೆ ಹೆಚ್ಚಾಗಿ  ರೂ 21,065ಕ್ಕೆ ತಲುಪಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry