ಬುಧವಾರ, ನವೆಂಬರ್ 20, 2019
27 °C

ಚಿನ್ನ ಮತ್ತೆ ರೂ1160 ಕುಸಿತ

Published:
Updated:

ನವದೆಹಲಿ (ಪಿಟಿಐ): ಚಿನ್ನದ ಧಾರಣೆ ಮತ್ತೆ ಕುಸಿದಿದೆ. ಮಂಗಳವಾರ ಇಲ್ಲಿ ಸ್ಟಾಂಡರ್ಡ್ ಚಿನ್ನದ ಬೆಲೆ 10 ಗ್ರಾಂಗಳಿಗೆರೂ1,160 ಇಳಿಕೆಯಾಗಿದ್ದು, 21 ತಿಂಗಳ ಹಿಂದಿನ ಮಟ್ಟವಾದರೂ26,440ಕ್ಕೆ ತಗ್ಗಿದೆ. ಕಳೆದ ಮೂರು ದಿನಗಳಲ್ಲಿ ಚಿನ್ನದ ಧಾರಣೆ 10 ಗ್ರಾಂಗಳಿಗೆ ಒಟ್ಟಾರೆರೂ3160 ಕುಸಿತ ಕಂಡಿದೆ.ಬೆಳ್ಳಿ ಧಾರಣೆಯೂ ಮಂಗಳವಾರ ಕೆ.ಜಿಗೆರೂ1,875 ಕುಸಿದಿದ್ದುರೂ46,125ರಷ್ಟಾಗಿದೆ. ಬೆಳ್ಳಿ ಮೌಲ್ಯ ಕಳೆದ ಮೂರು ದಿನಗಳಲ್ಲಿ ಒಟ್ಟಾರೆರೂ6535 ರಷ್ಟು ಕುಸಿದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ ಎರಡು ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿದ್ದು ಪ್ರತಿ ಔನ್ಸ್‌ಗೆ 1,360 ಡಾಲರ್‌ಗೆ ಇಳಿದಿದೆ. ಕಳೆದ ಎರಡು ದಿನಗಳಲ್ಲಿ 200 ಡಾಲರ್‌ಗಳಷ್ಟು (ಶೇ 13ರಷ್ಟು)ಬೆಲೆ ಕುಸಿದಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಇನ್ನಷ್ಟು ಕುಸಿಯಬಹುದು ಎನ್ನುವ ಭೀತಿಯಿಂದ ಹೂಡಿಕೆದಾರರು ತಮ್ಮ ಬಳಿ ದಾಸ್ತಾನಿರುವ ಚಿನ್ನವನ್ನು ಮಾರಾಟ ಮಾಡಲು ಮುಗಿಬಿದ್ದಿರುವುದೇ ದಿಢೀರ್ ಬೆಲೆ ಇಳಿಕೆ ಕಾರಣ. ಚೀನಾ ಆರ್ಥಿಕ ಪ್ರಗತಿಗೆ ಸಂಬಂಧಿಸಿದ ನಕಾರಾತ್ಮಕ ಸುದ್ದಿಗಳು, ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸೈಪ್ರಸ್ ದೇಶ ಚಿನ್ನದ ಮೀಸಲು ಮಾರಾಟಕ್ಕೆ ಮುಂದಾಗಿರುವುದು ಕೂಡ ಅಂತರರಾಷ್ಟೀಯ ಚಿನಿವಾರ ಪೇಟೆಯಲ್ಲಿ ಬೆಲೆ ಇಳಿಯುವಂತೆ ಮಾಡಿದೆ.ದೇಶೀಯ ಚಿನಿವಾರ ಪೇಟೆಯಲ್ಲಿ ಮಂಗಳವಾರ 99.9 ಮತ್ತು 99.5 ಶುದ್ಧತೆಯ ಚಿನ್ನ  10 ಗ್ರಾಂಗಳಿಗೆ ಕ್ರಮವಾಗಿರೂ26,440  ಮತ್ತುರೂ26,240ರಷ್ಟಾಗಿದೆ.

ಪ್ರತಿಕ್ರಿಯಿಸಿ (+)