ಬುಧವಾರ, ಮೇ 18, 2022
27 °C

ಚಿನ್ನ ರೂ. 260, ಬೆಳ್ಳಿ 630 ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ/ನವದೆಹಲಿ(ಪಿಟಿಐ):  ಬೇಡಿಕೆ ಕಡಿಮೆಯಾದ ಪರಿಣಾಮ ಚಿನ್ನದ ಬೆಲೆ ಮಂಗಳವಾರ ಸ್ವಲ್ಪ ಮಟ್ಟಿಗೆ ತಗ್ಗಿತು. 10 ಗ್ರಾಂ ಚಿನ್ನ ನವದೆಹಲಿಯಲ್ಲಿ ರೂ.260, ಮುಂಬೈನಲ್ಲಿ ರೂ.90ರಷ್ಟು ಕಡಿಮೆ ಆಯಿತು. ಸಿದ್ಧ ಬೆಳ್ಳಿ ನವದೆಹಲಿಯಲ್ಲಿ ರೂ.630, ಮುಂಬೈನಲ್ಲಿ ರೂ.320ರಷ್ಟು ಇಳಿಯಿತು.ನವದೆಹಲಿ ಧಾರಣೆ: 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ.26,850ರಲ್ಲೂ, ಅಪರಂಜಿ ಚಿನ್ನ ರೂ.27,050ರಲ್ಲೂ ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ರೂ.41,100ರಲ್ಲಿ ಮಾರಾಟವಾಯಿತು.ಮುಂಬೈ ಧಾರಣೆ: ಸ್ಟ್ಯಾಂಡರ್ಡ್ ಚಿನ್ನ ರೂ.26,640ಕ್ಕೂ, ಅಪರಂಜಿ ಚಿನ್ನ ರೂ.26,780ಕ್ಕೂ ಇಳಿಯಿತು. ಕೆ.ಜಿ. ಬೆಳ್ಳಿ  ರೂ.41,670ರಲ್ಲಿ ಮಾರಾಟವಾಯಿತು.ಆಭರಣ ರಫ್ತು ಭಾರಿ ಕುಸಿತ

ನವದೆಹಲಿ(ಪಿಟಿಐ
): ದೇಶದ ಹರಳು ಮತ್ತು ಚಿನ್ನಾಭರಣ ರಫ್ತು ವಹಿವಾಟು ಶೇ 41ರಷ್ಟು ಭಾರಿ ಕುಸಿತ ಕಂಡಿದೆ. ಜೂನ್‌ನಲ್ಲಿ 230 ಕೋಟಿ ಡಾಲರ್(ರೂ.13,570 ಕೋಟಿ) ಮೌಲ್ಯದ ಆಭರಣ ರಫ್ತಾಗಿವೆ.2012ರ ಜೂನ್‌ನಲ್ಲಿ 400 ಕೋಟಿ ಡಾಲರ್(ರೂ.22,000 ಕೋಟಿ) ಆಭರಣ ರಫ್ತಾಗಿದ್ದವು ಎಂದು `ಹರಳು-ಆಭರಣ ರಫ್ತು ಉತ್ತೇಜನ ಸಮಿತಿ'(ಜಿಜೆಇಪಿಸಿ) ಅಧ್ಯಕ್ಷ ವಿಪುಲ್ ಷಾ ಮಂಗಳವಾರ ಸುದ್ದಿಸಂಸ್ಥೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.