ಚಿನ್ನ: ಲಾಭದಾಯಕ ವ್ಯವಸ್ಥಿತ ಹೂಡಿಕೆ

7

ಚಿನ್ನ: ಲಾಭದಾಯಕ ವ್ಯವಸ್ಥಿತ ಹೂಡಿಕೆ

Published:
Updated:
ಚಿನ್ನ: ಲಾಭದಾಯಕ ವ್ಯವಸ್ಥಿತ ಹೂಡಿಕೆ

1869ರಲ್ಲಿ ಅಸ್ತಿತ್ವಕ್ಕೆ ಬಂದಿರುವ 142 ವರ್ಷಗಳಷ್ಟು ಸುದೀರ್ಘ ಇತಿಹಾಸ ಹೊಂದಿರುವ `ಸಿ. ಕೃಷ್ಣಯ್ಯ ಚೆಟ್ಟಿ ಆಂಡ್ ಸನ್ಸ್~ ಚಿನ್ನಾಭರಣ ಮಾರಾಟ ಸಂಸ್ಥೆಯು, ರಾಜ್ಯದಲ್ಲಿ ಚಿನ್ನಾಭರಣಗಳ ವಹಿವಾಟಿನಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಹೊಂದಿದೆ.ಈ ಹಿಂದಿನ ಮೈಸೂರಿನ ಮಹಾರಾಜ ಒಡೆಯರ ಅವರಿಂದ ಹಿಡಿದು ಜನಸಾಮಾನ್ಯರವರೆಗೆ ಅತ್ಯುತ್ತಮ ಗುಣಮಟ್ಟದ, ವಿಶಿಷ್ಟ ವಿನ್ಯಾಸದ ಚಿನ್ನಾಭರಣಗಳನ್ನು ತಯಾರಿಸಿ ಕೊಡುತ್ತ ಮನಗೆಲ್ಲುತ್ತ ಬಂದಿದೆ.ತನ್ನ ಖಾಸಗಿ ಗ್ರಾಹಕರಿಗಾಗಿ 1999ರಲ್ಲಿ ಆರಂಭಿಸಿದ್ದ, ಸೀಮಿತವಾಗಿ ಬಳಕೆಯಲ್ಲಿದ್ದ `ಗೋಲ್ಡ್ ಸ್ಟ್ಯಾಂಡರ್ಡ್ 1869 ರೇಟ್ ಪ್ರೊಟೆಕ್ಷನ್ ಪ್ಲ್ಯಾನ್~  (`ಜಿಎಸ್‌ಟಿಡಿ ಆರ್‌ಪಿಪಿ~) ಅನ್ನು ಸಂಸ್ಥೆಯು ಈಗ ರಾಜ್ಯದಾದ್ಯಂತ ವಿಸ್ತರಿಸಿದೆ. 11 ರಿಂದ 12 ವರ್ಷಗಳ ಯಶಸ್ವಿ ವಹಿವಾಟು ಮತ್ತು  ಜನಪ್ರಿಯತೆಯೇ ಯೋಜನೆಯನ್ನು ಈಗ ರಾಜ್ಯದಾದ್ಯಂತ ವಿಸ್ತರಿಸಲು ಕಾರಣವಾಗಿದೆ. ಚಿನ್ನಾಭರಣಗಳ ವಹಿವಾಟಿನಲ್ಲಿಯೇ ವಿಶಿಷ್ಟ ಬಗೆಯ ಯೋಜನೆ ಇದಾಗಿದೆ. ಅಸಂಘಟಿತ ವಲಯದ ಚಿನ್ನಾಭರಣ ವ್ಯಾಪಾರಿಗಳಲ್ಲಿ ಜಾರಿಯಲ್ಲಿ ಇರುವ ಯೋಜನೆಗಿಂತ ಇದು ತುಂಬ ಭಿನ್ನವಾಗಿದೆ.  ಸಂಘಟಿತ ರೂಪದಲ್ಲಿ ವ್ಯವಸ್ಥಿತವಾಗಿ ಈ ಯೋಜನೆ  ರೂಪಿಸಲಾಗಿದೆ. ಒಟ್ಟಾರೆ ವಹಿವಾಟು ಪಾರದರ್ಶಕ ಮತ್ತು ಎಲ್ಲ ವಿಶ್ವಾಸಾರ್ಹತೆಯಿಂದ ಕೂಡಿದೆ. ಚಿನ್ನ, ಬೆಳ್ಳಿ, ವಜ್ರಗಳ ಬೆಲೆ ಏರಿಕೆ ವಿರುದ್ಧ ರಕ್ಷಣೆ ನೀಡುವ ವಿಶಿಷ್ಟ ಯೋಜನೆಯೂ ಇದಾಗಿದೆ. ಗ್ರಾಹಕರು ಭವಿಷ್ಯದ ಅಗತ್ಯಗಳಿಗಾಗಿ ನಿಗದಿತ ಅಂತರದಲ್ಲಿ ಪಾವತಿಸುವ ಹಣಕ್ಕೆ ಸರಾಸರಿ ಲೆಕ್ಕದಲ್ಲಿ ಯೋಜನೆಯ ಕೊನೆಯಲ್ಲಿ ಅವರಿಷ್ಟದ ಚಿನ್ನಾಭರಣ ಖರೀದಿಸುವ ಸೌಲಭ್ಯ ಇಲ್ಲಿದೆ.ತಿಂಗಳಿಗೆ ಕನಿಷ್ಠ ರೂ. 250ರಿಂದ ಗರಿಷ್ಠ ರೂ. 5 ಲಕ್ಷದವರೆಗೂ ಹಣ ಹೂಡಬಹುದು. 12ರಿಂದ (1 ವರ್ಷದಿಂದ) 60 ತಿಂಗಳ (5 ವರ್ಷ) ವರೆಗೆ ಹೂಡಿಕೆ ಮಾಡಬಹುದು. ಕಂತುಗಳಲ್ಲಿ ಹಣ ಪಾವತಿಯಲ್ಲಿಯೂ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬಹುದು.ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಹೀಗೆ ಅನುಕೂಲತೆಗಳಿವೆ. ಹಣ ಹೂಡಿಕೆಯ ವೇಳೆಯಲ್ಲಿ ಇದ್ದ ಚಿನ್ನದ ಬೆಲೆಯ  ಸರಾಸರಿ ಆಧರಿಸಿ   ನಿರ್ಧರಿಸಲಾಗುವ ಚಿನ್ನದ ಪ್ರಮಾಣಕ್ಕೆ ಅನುಗುಣವಾಗಿ ಚಿನ್ನಾಭರಣಗಳನ್ನು ಖರೀದಿಸಬಹುದು.ಹೂಡಿಕೆಯ ಸರಾಸರಿ ಬೆಲೆಗೆ ಇಲ್ಲವೇ ಯೋಜನೆ ಪೂರ್ಣಗೊಂಡ ಸಂದರ್ಭದಲ್ಲಿ ಇರುವ ಬೆಲೆಗೆ ಅನುಗುಣವಾಗಿಯೂ ಆಭರಣ ಖರೀದಿಸಬಹುದು. ಒಂದು ವೇಳೆ ಚಿನ್ನದ ಬೆಲೆ ಕಡಿಮೆಯಾಗಿದ್ದರೂ ಅದಕ್ಕೆ ತಕ್ಕಂತೆಯೇ ಆಭರಣ ಖರೀದಿಸಬಹುದು.ಕಂತುಗಳನ್ನು ನಗದು, ಚೆಕ್, ಡಿಡಿಗಳಲ್ಲಿ, ಕ್ರೆಡಿಟ್ ಕಾರ್ಡ್ ಮೂಲಕವೂ ಪಾವತಿಸಬಹುದಾಗಿದ್ದು, ಶೀಘ್ರದಲ್ಲಿಯೇ ಆನ್‌ಲೈನ್‌ನಲ್ಲಿಯೂ ಪಾವತಿಸುವ ಸೌಲಭ್ಯ ಜಾರಿಗೆ ಬರಲಿದೆ.ಇದೊಂದು ಮ್ಯೂಚುವಲ್ ಫಂಡ್ ಅಥವಾ ಷೇರುಪೇಟೆಗಳಲ್ಲಿ ವಹಿವಾಟು ನಡೆಸುವ (ಇಟಿಎಫ್) ಯೋಜನೆ ಆಗಿರುವುದಿಲ್ಲ. ಹೀಗಾಗಿ ಇಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಪ್ರವೇಶ ಅಥವಾ ನಿರ್ಗಮನ ಶುಲ್ಕಗಳ ರಗಳೆ ಮತ್ತು ಮರೆಮಾಚುವ ವೆಚ್ಚಗಳು  ಇಲ್ಲ. ಯಾವುದೇ ದಿನ ಯೋಜನೆಯಲ್ಲಿ ಭಾಗಿಯಾಗಬಹುದು.ಇತರ ಸಾಂಪ್ರದಾಯಿಕ `ಚಿನ್ನಾಭರಣ ಉಳಿತಾಯ ಯೋಜನೆ~ಗಳಿಗೆ ಹೋಲಿಸಿದರೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಸಾಂಪ್ರದಾಯಿಕ ಉಳಿತಾಯ ಯೋಜನೆಗಿಂತ ಇದು ಶೇ 14.60ರಷ್ಟು ಹೆಚ್ಚು ಲಾಭ ನೀಡುತ್ತದೆ ಎನ್ನುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನೋದ ಹಯಗ್ರೀವ ಹೇಳುತ್ತಾರೆ.ಹೆಣ್ಣು ಮಕ್ಕಳ ಮದುವೆಗೆ ಚಿನ್ನಾಭರಣ ಖರೀದಿಗೆ ನಾಲ್ಕೈದು ವರ್ಷ ಮೊದಲೇ ಹಣ ತೊಡಗಿಸುವುದರಿಂದ ಪಾಲಕರಿಗೆ ಹೆಚ್ಚು ಹೊರೆಯಾಗದು.5 ವರ್ಷಗಳ ನಂತರ ಸದ್ಯದ ರೂ. 1 ಲಕ್ಷದ ಮೊತ್ತದ ಚಿನ್ನಾಭರಣಗಳಿಗೆ ರೂ.2 ಲಕ್ಷಕ್ಕಿಂತ ಹೆಚ್ಚು ಹಣ ಹೂಡಿಕೆ ಮಾಡಬೇಕಾಗಬಹುದು. ಆ ಹೊರೆ ತಪ್ಪಿಸಿಕೊಳ್ಳಲು ಈಗಿನಿಂದಲೇ ಹಂತ ಹಂತವಾಗಿ ಹಣ ತೊಡಗಿಸಿದರೆ 5 ವರ್ಷಗಳ ನಂತರ ರೂ.2 ಲಕ್ಷಕ್ಕೆ ಖರೀದಿಸಲು ಸಾಧ್ಯವಿರುವ ಚಿನ್ನಕ್ಕಿಂತ ಹೆಚ್ಚಿನ ಚಿನ್ನ ಈ ಯೋಜನೆಯಲ್ಲಿ ದೊರೆಯಲಿದೆ.ರಾಜ್ಯದ ವಿವಿಧ ಭಾಗದಲ್ಲಿ ಇರುವ ಆಸಕ್ತರು ಇಂಟರ್‌ನೆಟ್ ತಾಣಕ್ಕೆ ಭೇಟಿ ನೀಡಿ      (http://­www.ckcsons.­com) ಆನ್‌ಲೈನ್ ಮೂಲಕವೂ ಅರ್ಜಿ ಭರ್ತಿ ಮಾಡಬಹುದು. ನಮೂನೆಯಲ್ಲಿ ನಾಮಕರಣ ಸೌಲಭ್ಯವೂ ಸೇರಿದಂತೆ ಎಲ್ಲ ವಿವರಗಳು ಇರುತ್ತವೆ. ಹೂಡಿಕೆ ವಿವರಗಳ್ನನೆಲ್ಲ ಭರ್ತಿ ಮಾಡಿ ಯೋಜನೆಗೆ ಸೇರ್ಪಡೆಗೊಳ್ಳಬಹುದು.ಪ್ರತಿ ತಿಂಗಳೂ, ತ್ರೈಮಾಸಿಕ, ಅರ್ಧವಾರ್ಷಿಕ, ವರ್ಷಕ್ಕೆ ಒಂದು ಬಾರಿ ಪಾವತಿ ಆಯ್ಕೆಗಳು ಇಲ್ಲಿವೆ. ನಗದು, ಚೆಕ್, ಕ್ರೆಡಿಟ್ ಕಾರ್ಡ್ ಮೂಲಕವೂ ಹಣ ಪಾವತಿಸಬಹುದು.ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು  ಕರ್ಣಾಟಕ ಬ್ಯಾಂಕ್ ಶಾಖೆ ಮೂಲಕವೂ ಈ ಯೋಜನೆ ಜಾರಿಗೊಳಿಸುವ ಆಲೋಚನೆ ಕಾರ್ಯರೂಪಕ್ಕೆ ತರಲಾಗುತ್ತಿದೆ. ` ಎಸ್‌ಬಿಐ~ ಜತೆಗೂ ಮಾತುಕತೆ ನಡೆದಿವೆ. ಚಿನ್ನದ ಬೆಲೆ ಹೆಚ್ಚುತ್ತಲೇ ಇದೆ. 24, 36 ತಿಂಗಳ ನಂತರ  ಆಕಸ್ಮಾತಾಗಿ ಬೆಲೆ ಕಡಿಮೆ ಆಗಿದ್ದರೆ, ಆ ಬೆಲೆಯಲ್ಲಿಯೇ ಚಿನ್ನಾಭರಣ ಖರೀದಿಸಬಹುದು.ಚಿನ್ನಾಭರಣಗಳು ವಿನ್ಯಾಸಗಳು ಸ್ಫೋಟಕ ರೂಪದಲ್ಲಿ ಬದಲಾಗುತ್ತಿವೆ. ಯುವ ಜನರ ಅಭಿರುಚಿಗೆ ತಕ್ಕಂತೆ ಹಗುರ ವಿಶಿಷ್ಟ ವಿನ್ಯಾಸದ ಆಭರಣಗಳ ತಯಾರಿಕೆಗೆ ತಂತ್ರಜ್ಞಾನ, ಕಂಪ್ಯೂಟರ್‌ಗಳೂ ನೆರವಿಗೆ ಬರುತ್ತಿವೆ.ಯುವ ವಿನ್ಯಾಸಕಾರರು ತಮ್ಮೆಲ್ಲ ಸೃಜನಶೀಲತೆ ಪಣಕ್ಕಿಟ್ಟು ಆಕರ್ಷಕ ವಿನ್ಯಾಸಗಳನ್ನು ರೂಪಿಸುತ್ತಿದ್ದಾರೆ ಎಂದು ವಿನೋದ ಅಭಿಪ್ರಾಯಪಡುತ್ತಾರೆ.ಆಭರಣಗಳ ಬೆಲೆ ಒಂದೇ ಇದ್ದರೂ ಉತ್ತಮ ಗುಣಮಟ್ಟ ಕೊಡಲು ನಾವು ಕೊಂಚಮಟ್ಟಿಗೆ ಹೆಚ್ಚು ಶ್ರಮ ಪಡುತ್ತೇವೆ. ಸಂಸ್ಥೆಯು ಮೂಲ (ಬೇಸಿಕ್) ಚಿನ್ನಾಭರಣಗಳ ಬದಲಿಗೆ `ಫೈನ್ ಜುವೆಲ್ಲರಿ~ಯಲ್ಲಿ ತನ್ನ ವಹಿವಾಟು ಕೇಂದ್ರೀಕರಿಸಿದೆ. `ಮೂಲ ಚಿನ್ನಾಭರಣಗಳ  ಶೇ 80ರಷ್ಟು ವಹಿವಾಟನ್ನು ಎಲ್ಲರೂ ನಡೆಸುತ್ತಾರೆ.ಆದರೆ, `ಫೈನ್ ಜುವೆಲರಿ~ಯ ಶೇ 20ರಷ್ಟು ವಿಶಿಷ್ಟ ವಹಿವಾಟು ನಡೆಸುವ ಸಂಸ್ಥೆಗಳು ತುಂಬ ವಿರಳ. ಅಂತಹ ಅಪರೂಪದ ಸಂಸ್ಥೆಗಳಲ್ಲಿ ನಮ್ಮದೂ ಒಂದಾಗಿದೆ.ಗ್ರಾಹಕರಿಂದ ಹೆಚ್ಚು ಹಣ ಪಡೆಯದೇ,  ಹೆಚ್ಚು ಶ್ರಮಪಟ್ಟು ಗ್ರಾಹಕರಿಗೆ ಹೆಚ್ಚು ಮೌಲ್ಯ ಒದಗಿಸುವುದು ಸಂಸ್ಥೆಯ ಧ್ಯೇಯವಾಗಿದ್ದು, ಆ ತತ್ವಜ್ಞಾನಕ್ಕೆ ಅನುಗುಣವಾಗಿಯೇ ಈ ವಿಶಿಷ್ಟ ಯೋಜನೆ ಮೂಲಕ ಗ್ರಾಹಕರಿಗೆ ನೆರವಾಗುತ್ತಿದ್ದೇವೆ ಎಂದೂ ವಿನೋದ ಹಯಗ್ರೀವ್ ಹೇಳುತ್ತಾರೆ.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry