ಶನಿವಾರ, ಏಪ್ರಿಲ್ 17, 2021
32 °C

ಚಿನ್ನ ಸಾರ್ವಕಾಲಿಕ ದಾಖಲೆ; ರೂ 32950

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಮುಂಬೈ(ಪಿಟಿಐ):   ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ರೂ32950ಕ್ಕೇರಿದ್ದು, ಇದು ಸಾರ್ವಕಾಲಿಕ ದಾಖಲೆ ಮಟ್ಟವಾಗಿದೆ. ಸೆ. 14ರಂದು ರೂ32900ಕ್ಕೇರಿದ್ದೇ ಈ ಮೊದಲಿನ ಗರಿಷ್ಠ ಮಟ್ಟವಾಗಿತ್ತು.ಸೋಮವಾರ ಇಲ್ಲಿನ ಪೇಟೆಯಲ್ಲಿ ಶೇ 99.9 ಶುದ್ಧಚಿನ್ನ 10 ಗ್ರಾಂಗೆ 100 ರೂಪಾಯಿ ಬೆಲೆ ಹೆಚ್ಚಿಸಿಕೊಳ್ಳುವುದರೊಂದಿಗೆ ರೂ32,950ಕ್ಕೇರಿತು. ಶೇ 99.5 ಶುದ್ಧತೆಯ ಚಿನ್ನ ರೂ32,750ಕ್ಕೆ ಬಂದಿತು.ಬೆಳ್ಳಿ ದರವೂ ಕೆ.ಜಿ.ಗೆ ರೂ200 ಹೆಚ್ಚಿದ್ದು, ರೂ63,200ರಲ್ಲಿ ಮಾರಾಟವಾಯಿತು.

ಮುಂಬೈನಲ್ಲಿ 10 ಗ್ರಾಂ ಸ್ಟಾಂಡರ್ಡ್ ಚಿನ್ನ ರೂ160ರಷ್ಟು ಹೆಚ್ಚಿ ರೂ32,500 ರಲ್ಲಿ, ಅಪರಂಜಿ ಚಿನ್ನ ರೂ155 ಏರಿಕೆಯೊಂದಿಗೆ ರೂ32,640ರಲ್ಲಿ ವಹಿವಾಟು ನಡೆಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.