ಶುಕ್ರವಾರ, ಜೂನ್ 25, 2021
29 °C

ಚಿನ್ನ ₨255, ಬೆಳ್ಳಿ ₨540 ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ):  ಬೇಡಿಕೆ ಕಡಿಮೆ­ಯಾದ ಪರಿಣಾಮ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ  ಸತತ ಇಳಿಕೆ ಕಾಣುತ್ತಿದೆ. ಗುರುವಾರ ನವದೆಹಲಿ­ಯಲ್ಲಿ ಸ್ಟ್ಯಾಂಡರ್ಡ್‌ ಚಿನ್ನದ ಧಾರಣೆ 10 ಗ್ರಾಂಗಳಿಗೆ ₨255 ತಗ್ಗಿದ್ದು ₨30,425ಕ್ಕೆ ಇಳಿದಿದೆ. ಬೆಳ್ಳಿ ಬೆಲೆಯೂ ಕೆ.ಜಿಗೆ ₨540 ಕಡಿಮೆ­ಯಾಗಿದ್ದು ₨45,700ಕ್ಕೆ ಜಾರಿದೆ.ಚಿನ್ನದ ಬೆಲೆ ಕಳೆದ ಮೂರು ದಿನಗಳಲ್ಲಿ ₨150 ಮತ್ತು ಬೆಳ್ಳಿ ಮೌಲ್ಯ ₨960ರಷ್ಟು ಕುಸಿದಿದೆ.ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಕೆ  ಮಾಡುವ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಂತರ­ರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಗುರುವಾರ ಪ್ರತಿ ಔನ್ಸ್‌ಗೆ ಶೇ 0.38ರಷ್ಟು ಕುಸಿದು 1,325 ಡಾಲರ್‌­ಗಳಿಗೆ ಇಳಿದಿದೆ. ಫೆ.28ರ ನಂತರ ದಾಖಲಾಗಿರುವ ಕನಿಷ್ಠ ಧಾರಣೆ ಇದಾಗಿದೆ. ಆಮದು ಹೆಚ್ಚಿದರೆ ಬೆಲೆ ಇಳಿಕೆ

ಮುಂಬೈ (ಪಿಟಿಐ): ಚಿನ್ನ ಆಮದು ಮಾಡಿಕೊಳ್ಳಲು ಹೆಚ್ಚಿನ ಬ್ಯಾಂಕುಗಳಿಗೆ ಅವಕಾಶ ನೀಡಿರುವುದರಿಂದ  ಬೆಲೆ ಕಡಿಮೆ ಆಗುತ್ತದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕಿನ ಡೆಪ್ಯುಟಿ ಗವರ್ನರ್‌ ಕೆ.ಸಿ. ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ.ಚಾಲ್ತಿ ಖಾತೆ ಕೊರತೆ (ಸಿಎಡಿ) ಗಣನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ‘ಆರ್‌ಬಿಐ’, ಚಿನ್ನ ಆಮದು ಮಾಡಿ­ಕೊಳ್ಳಲು ಆ್ಯಕ್ಸಿಸ್‌ ಬ್ಯಾಂಕ್‌, ಕೊಟೆಕ್‌ ಮಹೀಂದ್ರಾ,  ಇಂಡಸ್‌ ಇಂಡ್‌ ಸೇರಿ­ದಂತೆ ಖಾಸಗಿ ಬ್ಯಾಂಕುಗಳಿಗೆ ಇತ್ತೀಚೆಗೆ ಅನುಮತಿ ನೀಡಿದೆ.ಆದರೆ, ಆಮದು ಮಾಡಿಕೊಳ್ಳುವ ಚಿನ್ನದಲ್ಲಿ ಶೇ 20ರಷ್ಟನ್ನು ರಫ್ತು ಉದ್ದೇಶಕ್ಕೆ ಬಳಸಬೇಕು.

ಉಳಿದಿದ್ದನ್ನು ಮಾತ್ರ ದೇಶೀಯ ಬಳಕೆಗೆ ಉಪಯೋ­ಗಿಸಬೇಕು ಎಂಬ  ನಿರ್ಬಂಧವನ್ನೂ ಹೇರಿದೆ.ಫೆಬ್ರುವರಿಯಲ್ಲಿ ಚಿನ್ನ ಮತ್ತು ಬೆಳ್ಳಿ ಆಮದು ಶೇ 71.4ರಷ್ಟು ಕುಸಿದಿದ್ದು 163ಕೋಟಿ ಡಾಲರ್‌ಗಳಿಗೆ (₨10,­106 ­ಕೋಟಿ) ತಗ್ಗಿದೆ. 2013ನೇ ಸಾಲಿನ ಫೆಬ್ರುವರಿಯಲ್ಲಿ 524ಕೋಟಿ ಡಾಲರ್‌ (₨32,488 ಕೋಟಿ) ಮೌಲ್ಯ ದ ಚಿನ್ನ, ಬೆಳ್ಳಿ ಆಮದು ಮಾಡಿಕೊ­ಳ್ಳಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.