ಗುರುವಾರ , ಜನವರಿ 23, 2020
28 °C

ಚಿಯರ್ ಲೀಡರ್ಸ್‌ಗೆ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಸಿಕ್ (ಪಿಟಿಐ): 2014 ರಲ್ಲಿ ನಡೆಯಲಿರುವ ಏಳನೇ ಆವೃತ್ತಿಯ ಐಪಿಎಲ್‌ ಪಂದ್ಯಗಳ ವೇಳೆ ಚಿಯರ್ ಲೀಡರ್ಸ್‌ಗಳಿಗೆ ನಿಷೇಧ ಹೇರುವುದಾಗಿ ಬಿಸಿಸಿಐ ಉಪಾಧ್ಯಕ್ಷ ರವಿ ಸಾವಂತ್ ತಿಳಿಸಿದ್ದಾರೆ.ಆರನೇ ಆವೃತ್ತಿಯ ಟೂರ್ನಿಯ ವೇಳೆ ಸ್ಪಾಟ್‌ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಗಳು ಜರುಗಿದ ನಂತರ ಬಿಸಿಸಿಐ ಮಾಜಿ ಅಧ್ಯಕ್ಷ ಜಗನ್‌ ಮೋಹನ್ ದಾಲ್ಮಿಯಾ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿತ್ತು. ಈ ಆಯೋಗ     ಬಿಸಿಸಿಐಗೆ ಸಲ್ಲಿಸಿರುವ ವರದಿಯಲ್ಲಿ ಪ್ರಮುಖವಾಗಿ ಹತ್ತು  ಬದಲಾವಣೆಗಳನ್ನು  ತರಬೇಕೆಂದು ಸೂಚಿಸಿದೆ.‘ಸಮಿತಿ  ನೀಡಿದ ವರದಿಯ ಆಧಾರದ ಮೇಲೆ ಈ ನಿರ್ಧಾರವನ್ನು ಕೈಗೊಂಡಿದ್ದೇವೆ.ಇದರ ಜೊತೆಗೆ ಇತರ ಒಂಬತ್ತು ಸಲಹೆಗಳನ್ನು ಮುಂದಿನ ಐಪಿಎಲ್‌ನಲ್ಲಿ ಜಾರಿಗೊಳಿಸುತ್ತೇವೆ’ ಎಂದು  ತಿಳಿಸಿದ್ದಾರೆ.ಏಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದಿನ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಯಲಿದೆ.

ಪ್ರತಿಕ್ರಿಯಿಸಿ (+)