ಸೋಮವಾರ, ಆಗಸ್ಟ್ 19, 2019
21 °C

ಚಿರಂಜೀವಿ ಸಲಹೆ

Published:
Updated:

ನವದೆಹಲಿ (ಪಿಟಿಐ): ತೆಲಂಗಾಣ  ರಚನೆಯನ್ನು ಕೇಂದ್ರ ಸಚಿವ ಮತ್ತು ಸಿನಿಮಾ ನಟ ಕೆ. ಚಿರಂಜೀವಿ ಒಪ್ಪಿಕೊಂಡಂತೆ ತೋರುತ್ತಿದ್ದು, `ಹೈದರಾಬಾದ್ ನಗರವು ಎರಡು ರಾಜ್ಯಗಳಿಗೂ ಕಾಯಂ ರಾಜಧಾನಿಯಾಗಿರಲಿ ಅಥವಾ ಅದಕ್ಕೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಲಿ' ಎಂದು ಸಲಹೆ ನೀಡಿದ್ದಾರೆ.ಕರಾವಳಿ ಆಂಧ್ರದ ಮೂಲದವರಾದ `ಮೆಗಾಸ್ಟಾರ್', `ಸಚಿವ ಸ್ಥಾನ ತೊರೆಯುವುದಿಲ್ಲ. ಬದಲಿಗೆ ಅಧಿಕಾರದಲ್ಲಿದ್ದುಗೊಂಡು ರಾಯಲಸೀಮೆ ಮತ್ತು ಸೀಮಾಂಧ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವೆ' ಎಂದಿದ್ದಾರೆ.ಸುಷ್ಮಾ ಒತ್ತಾಯ: `ತೆಲಂಗಾಣ ರಾಜ್ಯ ರಚನೆ ಕುರಿತ ಮಸೂದೆಯನ್ನು ಮುಂಗಾರು ಅಧಿವೇಶನದಲ್ಲೇ ಮಂಡಿಸಬೇಕು' ಎಂದು ಲೋಕಸಭೆಯ ಪ್ರತಿಪಕ್ಷ ಮತ್ತು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು `ಟ್ವಿಟರ್'ನಲ್ಲಿ ಬರೆದಿದ್ದಾರೆ.

Post Comments (+)