ಚಿರತೆಗೆ ಹಸು ಬಲಿ

7

ಚಿರತೆಗೆ ಹಸು ಬಲಿ

Published:
Updated:

ಗುಂಡ್ಲುಪೇಟೆ: ತಾಲ್ಲೂಕಿನ ಬೀಮನ­ಬೀಡು ಗ್ರಾಮದ ಹೊರವಲ­ಯದ ಚನ್ನಬಸವಶೆಟ್ಟಿ ಅವರಿಗೆ ಸೇರಿದ ಹಸುವೊಂದು ಚಿರತೆಗೆ ಗುರುವಾರ ರಾತ್ರಿ ಬಲಿಯಾಗಿದೆ.ಚನ್ನಬಸವಶೆಟ್ಟಿ ಒಬ್ಬರೇ ಮನೆಯ­ಲ್ಲಿದ್ದು, ಹಸು ಕಿರುಚಿದ ಶಬ್ದ ಕೇಳಿಯೂ ಹೆದರಿಕೆಯಿಂದ ಹೊರಗೆ ಬರಲಿಲ್ಲ ಎಂದು ತಿಳಿಸಿದ್ದಾರೆ.

ಈ ಭಾಗದಲ್ಲೇ ಗುರುವಾರ ಹುಲಿಯೊಂದನ್ನು ಸೆರೆಹಿಡಿಯಲಾಗಿತ್ತು. ಗುಂಡ್ಲುಪೇಟೆ ಅರಣ್ಯ ವಲಯದ  ಬೀಮನಬೀಡು ಬೀಟ್‌ನ ಅರಣ್ಯ ರಕ್ಷಕ ತೀರ್ಥಪ್ರಸಾದ್ ಸ್ಥಳಕ್ಕೆ ಬೇಟಿ ನೀಡಿ ಮಹಜರು ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry