ಸೋಮವಾರ, ಜನವರಿ 27, 2020
25 °C

ಚಿಲಿಯಲ್ಲಿ ಕಾಳ್ಗಿಚ್ಚು: ಜನರ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಯಾಂಟಿಯಾಗೊ (ಚಿಲಿ),(ಐಎಎನ್‌ಎಸ್): ರಾಷ್ಟ್ರದ ದಕ್ಷಿಣ ಭಾಗದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 500ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.`ಟೊರೆಸ್ ಡೆಲ್ ಪೈನ್~ ಎಂಬ ರಾಷ್ಟ್ರೀಯ ಉದ್ಯಾನದ ಆರು ಕಡೆ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಈ ಪೈಕಿ ನಾಲ್ಕು ಪ್ರದೇಶಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. 2.30 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಚಿಲಿ ಪ್ರಧಾನಿ ಸೆಬಾಸ್ಟಿಯನ್ ಪಿನೇರಾ ತಿಳಿಸಿದ್ದಾರೆ. ಇದುವರೆಗೆ 700ಕ್ಕೂ ಹೆಚ್ಚು ಜನರನ್ನು ಹೆಲಿಕಾಪ್ಟರ್‌ಗಳ ನೆರವಿನಿಂದ ರಕ್ಷಿಸಲಾಗಿದೆ

ಪ್ರತಿಕ್ರಿಯಿಸಿ (+)