ಮಂಗಳವಾರ, ನವೆಂಬರ್ 19, 2019
29 °C

ಚಿಲ್ಲರೆ ಇಲ್ಲ! ನಿರ್ವಾಹಕರ ಅಳಲು

Published:
Updated:

ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ ಮತ್ತಿತರೆ ಪ್ರಮುಖ ಸ್ಥಳಗಳಲ್ಲಿ ನಿರ್ವಾಹಕರಿಗೆ ಅವಶ್ಯ ಚಿಲ್ಲರೆ ಸಿಗುವ ಬಗ್ಗೆ ಪತ್ರಿಕೆಗಳಲ್ಲಿ ಇತ್ತೀಚೆಗಷ್ಟೆ ವರದಿ ಪ್ರಕಟವಾಗಿತ್ತು. ಆದರೆ ಬಿಎಂಟಿಸಿ ಬಸ್ಸುಗಳ ನಿರ್ವಾಹಕರಲ್ಲಿ ಈ ಬಗ್ಗೆ ಕೇಳಿದರೆ `ಅಯ್ಯ್! ಅದು ಬರೀ ಪತ್ರಿಕಾ ಹೇಳಿಕೆ ಅಷ್ಟೇ. ಕಾರ‌್ಯಗತ ಆಗುವುದು ಯಾವಾಗಲೋ?' ಅಂತ ಹೇಳುತ್ತಾರೆ.ಹಾಗಿದ್ದರೆ ಅಲ್ಲಿವರೆಗೆ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ಮಾತಿನ ಚಕಮಕಿ ಅನಿವಾರ್ಯವೇ?  ಅಧಿಕಾರಿಗಳು ಉತ್ತರಿಸುವರೇ? 

ಪ್ರತಿಕ್ರಿಯಿಸಿ (+)