ಚಿಲ್ಲರೆ ಕ್ಷೇತ್ರಕ್ಕೆ ಎಫ್ ಡಿ ಐ: ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ

7

ಚಿಲ್ಲರೆ ಕ್ಷೇತ್ರಕ್ಕೆ ಎಫ್ ಡಿ ಐ: ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ

Published:
Updated:

ನವದೆಹಲಿ (ಪಿಟಿಐ): ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ನೇರ ವಿದೇಶೀ ಬಂಡವಾಳ ಹೂಡಿಕೆಗೆ (ಎಫ್ ಡಿಐ) ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿತು.ಆದರೆ ಕಾನೂನಿನ ಸಮ್ಮತಿ ಪಡೆಯುವಲ್ಲಿ ~ವಾಸಿ ಪಡಿಸಬಹುದಾದಂತಹ~ ಅಸ್ತವ್ಯಸ್ತತೆಯ ~ಬಾಧೆ~ಯಿಂದ ಸರ್ಕಾರದ ನೀತಿ ನರಳುತ್ತಿದೆ ಎಂದು ನ್ಯಾಯಮೂರ್ತಿಗಳಾದ ಆರ್. ಎಂ. ಲೋಧಾ ಮತ್ತು ಎ.ಆರ್. ದವೆ ಅವರನ್ನು ಒಳಗೊಂಡ ಪೀಠವು ಅಭಿಪ್ರಾಯ ಪಟ್ಟಿತು.

 

ಸರ್ಕಾರದ ನೀತಿಯನ್ನು ಜಾರಿಗೊಳಿಸಲು ಅನುಕೂಲವಾಗುವಂತೆ ವಿದೇಶೀ ವಿನಿಯಮ ನಿರ್ವಹಣಾ ಕಾಯ್ದೆ (ಎಫ್ ಇ ಎಂಎ- ಫೆಮಾ) ನಿಯಮಗಳಿಗೆ ತಿದ್ದುಪಡಿ ತರುವಂತೆ ಪೀಠವು ಭಾರತೀಯ ರಿಸರ್ವ್ ಬ್ಯಾಂಕ್ ಗೆ (ಆರ್ ಬಿ ಐ) ಸೂಚಿಸಿತು.ಎಫ್ ಡಿ ಐ ನೀತಿಯನ್ನು ಅನುಷ್ಠಾನಗೊಳಿಸುವ ಮುನ್ನವೇ ರಿಸರ್ವ್ ಬ್ಯಾಂಕ್ ಫೆಮಾ ನಿಯಮಗಳಿಗೆ ತಿದ್ದುಪಡಿ ತರಬೇಕಾಗಿತ್ತು ಎಂದು ಹೇಳಿದ ಪೀಠ, ನೀತಿಗೆ ಅಂತಿಮ ರೂಪ ನೀಡುವ ಮಾರ್ಗದಲ್ಲಿನ ಲೋಪದೋಷಗಳನ್ನು ನಿವಾರಿಸುವಂತೆ ಬ್ಯಾಂಕಿಂಗ್ ವ್ಯವಸ್ಥೆಯ ನಿಯಂತ್ರಕ ಸಂಸ್ಥೆಗೆ ಸೂಚಿಸಿತು.ಕೇಂದ್ರ ಸರ್ಕಾರವು ಪ್ರಕಟಣೆ ಹೊರಡಿಸುವ ಮುನ್ನವೇ ನಿಯಮಗಳಿಗೆ ತಿದ್ದುಪಡಿ ಮಾಡಬೇಕಾಗಿತ್ತು ಎಂದು ಹೇಳಿದ ಪೀಠ, ಫೆಮಾ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ರಿಸರ್ವ್ ಬ್ಯಾಂಕ್ ಈಗಲೂ ~ಅಸ್ತವ್ಯವಸ್ತತೆ~ಯನ್ನು ನಿವಾರಿಸಬಹುದು ಎಂದು ಹೇಳಿತು.~ಈ ಅಸ್ತವ್ಯಸ್ತತೆಯ ಬಾಧೆ ವಾಸಿಪಡಿಸಬಹುದಾದದ್ದು. ಆದಷ್ಟೂ ಬೇಗನೆ ತಿದ್ದುಪಡಿ ತರುವ ಮೂಲಕ ಇದನ್ನು ವಾಸಿ ಮಾಡಬಹುದು ಎಂದು ಪೀಠ ಅಭಿಪ್ರಾಯಪಟ್ಟಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry