ಬುಧವಾರ, ಮೇ 18, 2022
23 °C

ಚಿಲ್ಲರೆ ಹಣದುಬ್ಬರ ದರ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತರಕಾರಿ, ಖಾದ್ಯ ತೈಲ ಮತ್ತು ಹಾಲಿನ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ದರ ಮೇ ತಿಂಗಳಲ್ಲಿ ಶೇ 10.36ಕ್ಕೆ ಏರಿಕೆ ಕಂಡಿದೆ.ಕಳೆದ ಏಪ್ರಿಲ್ ತಿಂಗಳಲ್ಲಿ `ಸಿಪಿಐ~ ಶೇ 10.32ರಷ್ಟಿತ್ತು. ಪ್ರಸಕ್ತ ಅವಧಿಯಲ್ಲಿ ತರಕಾರಿಗಳ ಬೆಲೆ ಶೇ 26ರಷ್ಟು ಏರಿಕೆ ಕಂಡಿದೆ. ಖಾದ್ಯ ತೈಲ ಮತ್ತು ಹಾಲಿನ ದರಗಳು ಕ್ರಮವಾಗಿ ಶೇ 18 ಮತ್ತು ಶೇ 14ರಷ್ಟು ತುಟ್ಟಿಯಾಗಿವೆ. ಮೊಟ್ಟೆ, ಮಾಂಸ ಮತ್ತು ಮೀನಿನ ಧಾರಣೆ ಶೇ 10ರಷ್ಟು ಹೆಚ್ಚಳ ಕಂಡಿವೆ.ಮದ್ಯ ಹೊರತುಪಡಿಸಿ ಇತರ ಪಾನೀಯಗಳ ಬೆಲೆ ಶೇ 9ರಷ್ಟು ತುಟ್ಟಿಯಾಗಿದೆ. ಬೇಳೆಕಾಳುಗಳ ಬೆಲೆ ಶೇ 5ರಷ್ಟು ಏರಿಕೆಯಾಗಿದೆ. ಸಕ್ಕರೆ ಧಾರಣೆ ಶೇ 5ರಷ್ಟು ಹೆಚ್ಚಿದೆ. ವಿದ್ಯುತ್ ದೀಪಗಳು, ಜವಳಿ, ಪಾದರಕ್ಷೆ ಮತ್ತಿತರ ಸರಕುಗಳ ಬೆಲೆ ಎರಡು ಪಟ್ಟು ಹೆಚ್ಚಳವಾಗಿದೆ.ಮೇ ತಿಂಗಳಲ್ಲಿ ಗ್ರಾಮೀಣ ಮತ್ತು ನಗರ ಹಣದುಬ್ಬರ ದರ ಕ್ರಮವಾಗಿ ಶೇ 9.57 ಮತ್ತು ಶೇ 11.52ಕ್ಕೆ ಏರಿಕೆ ಕಂಡಿದೆ.ಕಳೆದ ವಾರ ಸಗಟು ಸೂಚ್ಯಂಕ ಆಧರಿಸಿದ ಹಣದುಬ್ಬರ (ಡಬ್ಲ್ಯುಪಿಐ) ದರ ಪ್ರಕಟಗೊಂಡಿದ್ದು ಶೇ 7.55ಕ್ಕೆ ಏರಿಕೆ ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.