ಚಿಲ್ಲರ್ಗಿ: ಸಂಭ್ರಮದ ತೊಟ್ಟಿಲು ಮೆರವಣಿಗೆ

7

ಚಿಲ್ಲರ್ಗಿ: ಸಂಭ್ರಮದ ತೊಟ್ಟಿಲು ಮೆರವಣಿಗೆ

Published:
Updated:

ಜನವಾಡ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಬೀದರ್ ತಾಲ್ಲೂಕಿನ ಚಿಲ್ಲರ್ಗಿ ಗ್ರಾಮದಲ್ಲಿ ಮಂಗಳವಾರ ವಾಲ್ಮೀಕಿಯವರ ತೊಟ್ಟಿಲು ಹಾಗೂ ಭಾವಚಿತ್ರದ ಮೆರವಣಿಗೆ ನಡೆಯಿತು.ಮಹಿಳೆಯರಿಂದ ಬೆಳಿಗ್ಗೆ ಗ್ರಾಮದ ವಾಲ್ಮೀಕಿ ಮಂದಿರದಲ್ಲಿ ತೊಟ್ಟಿಲು ಕಾರ್ಯಕ್ರಮ ನೆರವೇರಿತು. ನಂತರ ಸೈಕಲ್ ಮೇಲೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮದೊಂದಿಗೆ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಜರುಗಿತು. ಗ್ರಾಮದ ದಳಪತಿಗಳಾದ ಭೀಮರೆಡ್ಡಿ ಮೆರವಣಿಗೆಗೆ ಚಾಲನೆ ನೀಡಿದರು. ಕಳಶದೊಂದಿಗೆ ಮಹಿಳೆಯರು ಮೆರಗು ಹೆಚ್ಚಿಸಿದರು.ಗ್ರಾ.ಪಂ: ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಸುಧಾ ಉದ್ಘಾಟಿಸಿದರು.ಉಪಾಧ್ಯಕ್ಷ ಮನೋಹರ ಹೊಸಮನಿ, ಸದಸ್ಯರಾದ ರಾಜಕುಮಾರ ಎಸ್ಕೆ, ಹಾಜಿ ಪಟೇಲ್, ಪ್ರಭು, ಪ್ರಮುಖರಾದ ಅಖಿಲ್ ಪಟೇಲ್, ಯೋಹನ್ ಡಿಸೋಜಾ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸುಭಾಷ ಮತ್ತಿತರರು ಉಪಸ್ಥಿತರಿದ್ದರು.ಆರೋಗ್ಯ ಕೇಂದ್ರ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪ್ರಾಥಮಿಕ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಡಾ. ಪದ್ಮರಾಜ, ಡಾ. ಲೋಕೇಶ, ಡಾ. ನಖಿ, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಗುಲಾಬ್‌ಸಿಂಗ್ ಠಾಕೂರ್ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತರಾದ ಖಮರಬಿ ಹಾಗೂ ವರ್ಗಾವಣೆಗೊಂಡಿರುವ ಅಮರಜೀತ್ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry