ಚೀಣಿಯರನ್ನು ಓಡಿಸಲು ಕಡೆತನಕ ಹೋರಾಟ

7

ಚೀಣಿಯರನ್ನು ಓಡಿಸಲು ಕಡೆತನಕ ಹೋರಾಟ

Published:
Updated:

ಸೋಮವಾರ, 15-10-1962ಚೀಣಿಯರನ್ನು ಓಡಿಸಲು ಕಡೆತನಕ ಹೋರಾಟ

ಬೆಂಗಳೂರು, ಅ. 14- “ನಾವು ನೀಡಿದ ಸ್ನೇಹ ಹಸ್ತಕ್ಕೆ ಪ್ರತಿಯಾಗಿ ದ್ರೋಹ ಬಗೆದು, ನಮ್ಮ ದೇಶದ ಮೇಲೆ ಆಕ್ರಮಣ ನಡೆಸಿರುವ ಚೀಣೀಯರನ್ನು ಹೊಡೆದೋಡಿಸಲು, ಈ ದೇಶದಲ್ಲಿ ಕೊನೆಯ ವ್ಯಕ್ತಿ ಹಾಗೂ ಬಂದೂಕು ಇರುವ ತನಕವೂ ಹೋರಾಡುತ್ತೇವೆ” ಎಂದು ರಕ್ಷಣಾ ಸಚಿವ ಶ್ರೀ ವಿ.ಕೆ. ಕೃಷ್ಣಮೆನನ್ ಅವರು ಇಂದು ಇಲ್ಲಿ ಘೋಷಿಸಿದರು.“ರಾಷ್ಟ್ರೀಯ ಐಕ್ಯತೆ ಎತ್ತಿತೋರಿಸುವ ಪರೀಕ್ಷಾ ಕಾಲವಿದು” ಎಂದು ಅವರು ತಿಳಿಸಿ, “ದೇಶದ ಸಮಗ್ರತೆ ಹಾಗೂ ಗೌರವದ ರಕ್ಷಣೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯವನ್ನು ನಿರ್ವಹಿಸಬೇಕೆಂದು” ಕರೆ ನೀಡಿದರು.ಭಾರತ, ಚೀಣ ಗಡಿ ವಿವಾದದ ಉಲ್ಬಣ ವಿಷಾದಕರ

ನವದೆಹಲಿ, ಅ. 14- ಚೀಣಿಯರು ಭಾರತದ ಭೂಭಾಗದ ಮೇಲೆ ನಡೆಸಿ ರುವ ಅತಿಕ್ರಮಣದಿಂದ ಹಿಮ್ಮೆಟ್ಟಿ ಉಭಯ ರಾಷ್ಟ್ರಗಳ ನಡುವೆ ಉಂಟಾಗಿ ರುವ ಹಗೆತನ ಕೊನೆಗಾಣಿಸ ಬೇಕೆಂಬ ಆಶಯನ್ನು ಭಾರತದ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry