ಚೀನಾದಲ್ಲಿ ಈಗ ಮನೆ ದುಬಾರಿ

7

ಚೀನಾದಲ್ಲಿ ಈಗ ಮನೆ ದುಬಾರಿ

Published:
Updated:

ಬೀಜಿಂಗ್ (ಐಎಎನ್‌ಎಸ್):  ಚೀನಾದ ಅನೇಕ ನಗರಗಳಲ್ಲಿ ಈಗ ಸ್ವಂತ ಮನೆ ಮಾಡಿಕೊಳ್ಳುವುದು ಕನಸಿನ ಮಾತು. ವರ್ಷದಿಂದ ವರ್ಷಕ್ಕೆ ಮನೆ ದುಬಾರಿಯಾಗ ತೊಡಗಿದೆ.ಚೀನಾದ 70 ಪ್ರಮುಖ ನಗರಗಳ ಪೈಕಿ 10 ನಗರಗಳಲ್ಲಿ ಕಳೆದ ಒಂದು ವರ್ಷದಲ್ಲಿ ಮನೆಗಳ ಬೆಲೆ ಶೇಕಡಾ 10ರಷ್ಟು ಜಾಸ್ತಿಯಾಗಿದೆ ಶಾಂಘೈ ಪತ್ರಿಕೆ ವರದಿ ಮಾಡಿದೆ.ಹುನಾನ್ ಪ್ರಾಂತ್ಯದ ಯೆಯಾಂಗ್‌ನಲ್ಲಿ ಅತಿ ಹೆಚ್ಚು ಅಂದರೆ ಶೇ 22ರಷ್ಟು ಬೆಲೆ ಏರಿಕೆಯಾಗಿದೆ. ನಂತರದ ಸ್ಥಾನದಲ್ಲಿ ಹೈಕು (ಶೇ 21.6), ಹೈನಾನ್ (ಶೇ 19.1) ನಗರಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry