ಶುಕ್ರವಾರ, ನವೆಂಬರ್ 22, 2019
23 °C

ಚೀನಾದಲ್ಲಿ ಪ್ರಬಲ ಭೂಕಂಪ, 113 ಜನರ ಸಾವು

Published:
Updated:

ಬೀಜಿಂಗ್ (ಪಿಟಿಐ): ನೈರುತ್ಯ ಚೀನಾದಲ್ಲಿ ಶನಿವಾರ 7.0 ತೀವ್ರತೆ ಪ್ರಬಲ ಭೂಕಂಪ ಸಂಭವಿಸಿದ್ದು, 113 ಮಂದಿ ಸಾವನ್ನಪ್ಪಿದ್ದು, 3 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಇಲ್ಲಿನ ಸಿಚುವಾನ್ ಪ್ರಾಂತ್ಯದಲ್ಲಿ ಸ್ಥಳಿಯ ಕಾಲಮಾನ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಂಭವಿಸಿದ ವಿನಾಶಕಾರಿ ಭೂಕಂಪವು ಅಕ್ಷರಶ: ಇಡೀ ಪ್ರಾಂತ್ಯದ ನಗರಗಳಲ್ಲಿನ ಕಟ್ಟಡಗಳನ್ನು ನಾಶಪಡಿಸಿದೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇಲ್ಲಿನ ವಿಮಾನನಿಲ್ದಾಣಗಳಿಗೂ ಹಾನಿಯಾಗಿದ್ದು ಅವನ್ನು ಮುಚ್ಚಲಾಗಿದೆ.ಸಾವಿರಾರು ಯೋಧರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು ಅವಶೇಷಗಳಡಿ ಬದುಕಿದ್ದವರಿಗಾಗಿ ಶೋಧ ನಡೆಸುತ್ತಿದ್ದಾರೆ.ಇಡೀ ಪ್ರಾಂತ್ಯದ ಜನರು ಭೂಕಂಪದಿಂದ ತತ್ತರಿಸಿದ್ದು ಭಯಭೀತಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕಳೆದ 5 ವರ್ಷಗಳಲ್ಲಿ ಈ ಭಾಗದಲ್ಲಿ ಸಂಭವಿಸುತ್ತಿರುವ 2ನೇ ಅತಿದೊಡ್ಡ ಭೂಕಂಪದ ಇದಾಗಿದೆ ಎಂದು ತಜ್ಞರು ಅಂದಾಜಿಸಿದ್ದು, ಸಾವುನೋವಿನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)