ಚೀನಾದಲ್ಲಿ ಪ್ರವಾಹ: 44 ಮಂದಿ ಸಾವು

ಮಂಗಳವಾರ, ಜೂಲೈ 16, 2019
28 °C

ಚೀನಾದಲ್ಲಿ ಪ್ರವಾಹ: 44 ಮಂದಿ ಸಾವು

Published:
Updated:

ಬೀಜಿಂಗ್ (ಐಎಎನ್‌ಎಸ್): ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಮಧ್ಯ ಮತ್ತು ಪೂರ್ವ ಚೀನಾದ ಪ್ರದೇಶಗಳು ಜಲಾವೃತವಾಗಿದ್ದು ಕನಿಷ್ಠ 44 ಮಂದಿ  ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹ್ಯುಬಿ, ಹುವಾನ್ ಮತ್ತು ಜಿಯಾಂಗ್‌ಜಿ ಪ್ರಾಂತ್ಯಗಳಲ್ಲಿ 33 ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ಜಿನ್‌ಹುವಾ ವರದಿಮಾಡಿದೆ. ಹ್ಯುಬಿಯಲ್ಲಿ ಧಾರಾಕಾರ ಮಳೆಯಿಂದಾದ ಪ್ರವಾಹದಿಂದ ಭೂಕುಸಿತವಾಗಿ ಮನೆಗಳು ಕುಸಿದಿದ್ದು ನದಿಗಳ ಏರಿಗಳು ನಾಶಗೊಂಡಿವೆ ಎಂದು ಪ್ರಾದೇಶಿಕ ಪ್ರವಾಹ ನಿಯಂತ್ರಣ  ಕಚೇರಿ ತಿಳಿಸಿದೆ. ಈ ಮೂರು ಜಿಯಾನಿಂಗ್ ಕೌಂಟಿಗಳಲ್ಲಿ ಸುಮಾರು ಒಂದು ಲಕ್ಷ ಮಂದಿ ಪ್ರವಾಹದಲ್ಲಿ ಸಿಲುಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry