ಸೋಮವಾರ, ಏಪ್ರಿಲ್ 12, 2021
31 °C

ಚೀನಾದಲ್ಲಿ 20000 ವರ್ಷ ಹಳೆಯ ಮಡಕೆ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಪ್ರಾಚ್ಯವಸ್ತು ಸಂಶೋಧಕರು ಚೀನಾದಲ್ಲಿ ಭೂಮಿಯಲ್ಲಿ ಹುದುಗಿದ್ದ ಪುರಾತನವಾದ ಜೇಡಿ ಮಣ್ಣಿನ ಮಡಕೆಗಳನ್ನು ಹೊರ ತೆಗೆದಿದ್ದಾರೆ. ಈ ಮಡಕೆಗಳು ಸುಮಾರು ಇಪ್ಪತ್ತು ಸಾವಿರ ವರ್ಷಗಳಷ್ಟು ಹಳೆಯದಾಗಿದ್ದು, ಅತ್ಯಂತ ಹಳೆಯ ಮಡಕೆಗಳಾಗಿವೆ ಎಂದು ಹೇಳಿದ್ದಾರೆ.ಇದುವರೆಗೆ ಹತ್ತು ಸಾವಿರ ವರ್ಷಗಳ ಹಿಂದೆ ಅಂದರೆ ಮಾನವನು ಬೇಟೆಯಾಡುವುದರಿಂದ ಹಿಡಿದು ಒಂದೆಡೆ ನೆಲೆ ನಿಂತು ಕೃಷಿ ಚಟುವಟಿಕೆ ಕೈಗೊಳ್ಳುವಾಗ ಮಡಕೆಗಳ ಬಳಕೆ ಮಾಡುತ್ತಿದ್ದ ಎಂದು ನಂಬಲಾಗಿತ್ತು.ಸಂಶೋಧಕರ ಪ್ರಕಾರ, ಈ ಮಡಕೆಗಳು ಶೋಧನಾ ಪ್ರಕ್ರಿಯೆಯನ್ನು ಮತ್ತಷ್ಟು ಹಿಂದಕ್ಕೆ ಅಂದರೆ ಹಿಮಯುಗಕ್ಕೆ ಕೊಂಡೊಯ್ಯುತ್ತವೆ. ಈ ಮಡಕೆಗಳನ್ನು ಹೇಗೆ ಮತ್ತು ಏಕೆ ತಯಾರಿಸಲಾಗಿದೆ ಎಂಬ ಬಗ್ಗೆ ತಿಳಿಯಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ ಎಂದು `ಡೈಲಿ ಮೇಲ್~ ವರದಿ ಮಾಡಿದೆ.ಆದರೆ ಹೊಸದಾಗಿ ಶೋಧಿಸಿದ ಈ ಮಡಕೆಗಳ ಕಾಲಗಣನೆ ಮಾಡಿರುವ ಸಂಶೋಧಕರು, ಮಡಕೆಗಳ ಮೇಲೆ ಸುಟ್ಟಿರುವ ಗುರುತುಗಳು ಪತ್ತೆಯಾಗಿದ್ದರಿಂದ ಇವುಗಳನ್ನು ಅಡುಗೆ ಮಾಡಲು ಬಳಸಿರಬಹುದು ಎಂದು ಹೇಳಿದ್ದಾರೆ.ಈ ಅವಶೇಷಗಳನ್ನು ದಕ್ಷಿಣ ಚೀನಾದ ಕ್ಸೇನರೆಂಡೊಂಗ್ ಗುಹೆಯಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.