ಶುಕ್ರವಾರ, ನವೆಂಬರ್ 22, 2019
26 °C

ಚೀನಾದಿಂದ ವಾಯುಪ್ರದೇಶ ಅತಿಕ್ರಮಣ

Published:
Updated:

ಲೆಹ್/ನವದೆಹಲಿ (ಪಿಟಿಐ): ಚೀನಾ ಸೈನಿಕರು ದೌಲತ್‌ಬೇಗ್ ಒಲ್ಡಿ (ಡಿಬಿಒ) ಸೆಕ್ಟರ್ ದಾಟಿ ಒಳನುಸುಳಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ, ಚೀನಾದ ಹೆಲಿಕಾಫ್ಟರ್‌ಗಳು ಭಾರತದ ಚುಮಾರ್‌ನ ವಾಯುಪ್ರದೇಶವನ್ನು ಪ್ರವೇಶಿಸಿವೆ.ಏಪ್ರಿಲ್ 21ರಂದು ವಾಯುಪ್ರದೇಶ ಪ್ರವೇಶಿಸಿದ ಚೀನಾ ಕಾಪ್ಟರ್‌ಗಳು ಆಹಾರ ಪೊಟ್ಟಣಗಳು, ಸಿಗರೇಟ್ ಪೊಟ್ಟಣ ಮತ್ತು ಸ್ಥಳೀಯ ಭಾಷೆಯಲ್ಲಿ ಬರೆದಿರುವ ಪತ್ರಗಳನ್ನು ವಾಯುಪ್ರದೇಶದಲ್ಲಿ ಉದುರಿಸಿ ಹೋಗಿವೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)