ಶನಿವಾರ, ಏಪ್ರಿಲ್ 17, 2021
27 °C

ಚೀನಾದ ಬೆಡಗಿ ಭುವನ ಸುಂದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಪಿಟಿಐ): ಚೀನಾದ 23 ವರ್ಷದ ಜಿಂಕೆ ಕಂಗಳ ಚೆಲುವೆ ವೆನ್ ಜಿಯಾ ಯೂ 2012ನೇ ಸಾಲಿನ ಭುವನ ಸುಂದರಿಯಾಗಿ ಆಯ್ಕೆಯಾಗಿದ್ದಾಳೆ. ವೇಲ್ಸ್‌ನ ಸೋಫಿ ಮೌಲ್ಡ್ಸ್ ಪ್ರಥಮ ರನ್ನರ್-ಅಪ್ ಮತ್ತು ಆಸ್ಟ್ರೇಲಿಯಾದ ಜೆಸ್ಸಿಕಾ ಕಹಾವಟಿ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.ಅಂತಿಮ ಸುತ್ತು ಪ್ರವೇಶಿಸುವ ಮೂಲಕ ಭರವಸೆ ಮೂಡಿಸಿದ್ದ ಭಾರತದ ವನ್ಯ ಮಿಶಾ ಏಳನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಅವರು `ಮಿಸ್ ಸೋಶಿಯಲ್ ಮೀಡಿಯಾ~ ಮತ್ತು `ಬ್ಯೂಟಿ ವಿತ್ ಎ ಪರ್ಪಸ್~ ಪ್ರಶಸ್ತಿ ಪಡೆದರು.ಡಾಂಗ್‌ಶೆಂಗ್‌ನ ಫಿಟ್‌ನೆಸ್ ಸೆಂಟರ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ವೆನ್ ಜಿಯಾ ಯೂಗೆ ಕಳೆದ ಸಾಲಿನ ಭುವನ ಸುಂದರಿ ವೆನುಜುವೆಲ್ಲಾದ ಐವಿಯನ್ ಸಾರ್ಕೋಸ್ ಅವರು ಕಿರೀಟ ತೊಡಿಸಿದರು. ಸಂಗೀತ ವಿದ್ಯಾರ್ಥಿಯಾಗಿರುವ ವೆನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನೂರಕ್ಕೂ ಹೆಚ್ಚು ಸ್ಪರ್ಧಿಗಳನ್ನು ಹಿಂದಿಕ್ಕಿ ಕಿರೀಟ ಮುಡಿಗೇರಿಸಿಕೊಂಡರು. ಇದರಿಂದಾಗಿ ಚೀನಾ ಎರಡು ಬಾರಿ ಭುವನ ಸುಂದರಿ ಕಿರೀಟವನ್ನು ತನ್ನದಾಗಿಸಿಕೊಂಡಾಂತಾಗಿದೆ. 1981ರಲ್ಲಿ ಬಿಡುಗಡೆಯಾಗಿದ್ದ ಉಮ್ರಾವ್ ಜಾನ್ ಹಿಂದಿ ಚಿತ್ರದ `ದಿಲ್ ಚೀಜ್ ಕ್ಯಾ ಹೈ~ ಹಾಡಿಗೆ ಹೆಜ್ಜೆ ಹಾಕಿದ ವನ್ಯ ಅಂತಿಮ ಸುತ್ತಿಗೆ ಆಯ್ಕೆಯಾದರು. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 2000ರಲ್ಲಿ ಭುವನ ಸುಂದರಿಯಾಗಿ ಆಯ್ಕೆಯಾಗಿದ್ದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.