ಬುಧವಾರ, ಫೆಬ್ರವರಿ 24, 2021
23 °C
ಮಲೇಷ್ಯಾ ವಿಮಾನ ಶೋಧ 3ನೇ ವಾರಕ್ಕೆ

ಚೀನಾ ಉಪಗ್ರಹಕ್ಕೆ ತೇಲುವ ವಸ್ತು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀನಾ ಉಪಗ್ರಹಕ್ಕೆ ತೇಲುವ ವಸ್ತು ಪತ್ತೆ

ಕ್ವಾಲಾಲಂಪುರ (ಪಿಟಿಐ, ಐಎಎನ್‌ಎಸ್‌): ನಿಗೂಢ­ವಾಗಿ ನಾಪತ್ತೆ­ಯಾಗಿರುವ ಮಲೇಷ್ಯಾ ವಿಮಾನ ಶೋಧ ಕಾರ್ಯಾಚಣೆ  ಮೂರನೇ ವಾರಕ್ಕೆ ಕಾಲಿಟ್ಟರೂ ಇನ್ನೂ ಮಹತ್ವದ ಸುಳಿವು ಸಿಕ್ಕಿಲ್ಲ. ಈ ನಡುವೆ, ಹಿಂದೂ ಮಹಾ­ಸಾಗರದ ದಕ್ಷಿಣ ಭಾಗದಲ್ಲಿ ತೇಲು­ತ್ತಿರುವ ದೊಡ್ಡ ವಸ್ತುವೊಂದರ ಚಿತ್ರ­ವನ್ನು ಚೀನಾ ಉಪಗ್ರಹ ಕೂಡ ಸೆರೆ­ಹಿಡಿದಿದ್ದು, ಇದು ಕಣ್ಮರೆಯಾದ ಮಲೇಷ್ಯಾ ವಿಮಾನದ ತುಣುಕು ಇರ­ಬಹುದು ಎಂದು ಚೀನಾ ತಿಳಿಸಿರು­ವುದಾಗಿ ಮಲೇಷ್ಯಾ ಹೇಳಿದೆ.‘ಮಾರ್ಚ್‌ 18ರ ಮಧ್ಯಾಹ್ನ ಉಪಗ್ರಹ ಸೆರೆಹಿಡಿದಿರುವ ಈ ವಸ್ತು 22.5 ಮೀಟರ್‌ ಉದ್ದ ಹಾಗೂ 13 ಮೀಟರ್‌್ ಅಗಲ  ಇದೆ. ಈ ವಸ್ತು ಗೋಚರಿಸಿರುವ ಸ್ಥಳ ಪರಿಶೀಲನೆಗಾಗಿ ಚೀನಾ ಹಡಗು ಕಳಿಸಿದೆ’  ಎಂದು ಮಲೇಷ್ಯಾ ರಕ್ಷಣೆ ಮತ್ತು ಸಾರಿಗೆ ಸಚಿವ ಹಿಷಮುದ್ದಿನ್‌ ಹುಸೇನ್‌ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.ಮುಂದುವರಿದ ಶೋಧ:  ೨೬ ದೇಶಗಳ ತಂಡ ಅತ್ಯಾಧುನಿಕ ಉಪಕರಣ­ಗಳೊಂದಿಗೆ ಸಮರೋಪಾದಿಯಲ್ಲಿ ಪತ್ತೆ ಕಾರ್ಯ ನಡೆಸುತ್ತಿದೆ. ಹಿಂದೂ ಮಹಾಸಾಗರದಲ್ಲಿ ವಿಮಾನ ಬಿದ್ದಿರುವ ಬಲವಾದ ಶಂಕೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಇದೇ ಭಾಗದಲ್ಲಿ ಕೇಂದ್ರೀಕೃತವಾಗಿದೆ. ಪ್ರತಿಕೂಲ ಹವಾ­ಮಾನದಿಂದಾಗಿ ಶುಕ್ರವಾರ ಕಾರ್ಯಾ­ಚರಣೆಗೆ ಅಡ್ಡಿ­ಯಾಗಿತ್ತು. ಶನಿವಾರ ವಾತಾವರಣ ತಿಳಿಯಾಗಿದ್ದು, ಆಸ್ಟ್ರೇ­ಲಿಯಾ ನೇತೃತ್ವದ ನೌಕಾ ಕಾರ್ಯಾ­ಚರಣೆ (ಅಮ್ಸಾ) ಚುರುಕುಗೊಂಡಿದೆ. ಮಾರ್ಚ್‌ 16ರಂದು ಆಸ್ಟ್ರೇಲಿಯಾ ಉಪಗ್ರಹ ಸೆರೆಹಿಡಿದಿದ್ದ ಚಿತ್ರದಲ್ಲಿ ಕಾಣುವ ಎರಡು ವಸ್ತುಗಳು, ನಾಪತ್ತೆಯಾದ ವಿಮಾನದ ಅವಶೇಷವೇ ಎನ್ನುವುದು ಕೂಡ ಇನ್ನೂ ಖಚಿತಗೊಂಡಿಲ್ಲ.ಅಮ್ಸಾ ಜತೆಗೆ ಚೀನಾ, ಜಪಾನ್‌ ಹಾಗೂ ಲಂಡನ್‌  ವಿಮಾನಗಳೂ ಕಾರ್ಯಾ­­ಚರಣೆಗೆ  ಕೈಜೋಡಿಸಲಿವೆ.ಅಮೆರಿಕಕ್ಕೆ ಮನವಿ: ಕಾರ್ಯಾಚರಣೆ­ಯಲ್ಲಿ ಪ್ರಗತಿ ಕಂಡುಬರದ ಕಾರಣ ತೀವ್ರ ಆತಂಕಕ್ಕೆ ಒಳಗಾಗಿರುವ ಮಲೇಷ್ಯಾ, ಆಳ ಸಮುದ್ರ ನಿಗಾ ವ್ಯವಸ್ಥೆಯ ಉಪಕರಣಗಳನ್ನು ಪೂರೈ­ಸಲು ಅಮೆರಿಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.‘ಹಿಷಮುದ್ದಿನ್‌ ಹುಸೇನ್‌ ಈ ಸಂಬಂಧ ಅಮೆರಿಕದ ರಕ್ಷಣಾ ಕಾರ್ಯ­ದರ್ಶಿ ಚಕ್‌ ಹೆಗಲ್‌ ಅವರೊಂದಿಗೆ ದೂರ­ವಾಣಿ ಸಂಭಾಷಣೆ ನಡೆಸಿದ್ದಾರೆ‘ ಎಂದು ಪೆಂಟಗಾನ್‌ ಪತ್ರಿಕಾ ಕಾರ್ಯ­ದರ್ಶಿ ಜಾನ್‌ ಕಿರ್ಬಿ ತಿಳಿಸಿದ್ದಾರೆ.ಅಮೆರಿಕ ಎಂತಹ ಉಪಕರಣ ಕಳು­ಹಿಸಿಕೊಡುತ್ತದೆ ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಆದರೆ ಆಳ ಸಮುದ್ರ ನಿಗಾ ವ್ಯವಸ್ಥೆಯ ಉಪಕರಣಗಳ ವಿಷಯದಲ್ಲಿ ಅಮೆರಿಕ ಸೇನೆ ಭಾರಿ ವೆಚ್ಚ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.