ಬುಧವಾರ, ನವೆಂಬರ್ 20, 2019
27 °C

ಚೀನಾ ಗಡಿ ಬಿಕ್ಕಟ್ಟು ಶಮನ: ಭಾರತದ ತೀವ್ರ ಯತ್ನ

Published:
Updated:

ನವದೆಹಲಿ (ಪಿಟಿಐ): ಸೇನಾ ಮುಖ್ಯಸ್ಥ ವಿಕ್ರಮ್ ಸಿಂಗ್ ಅವರು ರಕ್ಷಣಾ ಸಚಿವ ಎ.ಕೆ. ಆಂಟನಿ ಅವರನ್ನು ಗುರುವಾರ ಭೇಟಿ ಮಾಡಿ ಚೀನಾ ಗಡಿ ಅತಿಕ್ರಮಣ ಕುರಿತಂತೆ ವಿವರಿಸಿದರು.ಈ ಮಧ್ಯೆ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಅವರು ಮೇ 9 ರಂದು ಚೀನಾಕ್ಕೆ ತೆರಳಿ ಗಡಿ ಸಂಬಂಧ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಯತ್ನಿಸಲಿದ್ದಾರೆ.ಮುಂದಿನ ಮಾಸಾಂತ್ಯಕ್ಕೆ ಚೀನಾ ಪ್ರಧಾನಿ ಲೀ ಕೆಕಿಯಾಂಗ್ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಇದು ಭಾರಿ ಮಹತ್ವ ಪಡೆದುಕೊಂಡಿದೆ. ಅಧ್ಯಕ್ಷರಾದ ನಂತರ ಅವರು ನೀಡುತ್ತಿರುವ ಮೊದಲ ವಿದೇಶಿ ಭೇಟಿ ಇದಾಗಿದೆ.ಈ ಮಧ್ಯೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅಮೆರಿಕ ಭಾರತ - ಚೀನಾ ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದಕ್ಕೆ ತಾನು ಬೆಂಬಲ ನೀಡುವುದಾಗಿ ಪ್ರಕಟಿಸಿದೆ.

ಪ್ರತಿಕ್ರಿಯಿಸಿ (+)