ಗುರುವಾರ , ನವೆಂಬರ್ 14, 2019
22 °C

ಚೀನಾ- ಪಂಜಾಬ್ ಮಾದಕ ಜಾಲ ಸಂಪರ್ಕ

Published:
Updated:

ಚಂಡೀಗಡ (ಐಎಎನ್‌ಎಸ್): ಪಂಜಾಬ್‌ನಲ್ಲಿ ಸಕ್ರಿಯವಾಗಿರುವ ಅಂತರರಾಷ್ಟ್ರೀಯ ಮಾದಕ ವಸ್ತು ಜಾಲವನ್ನು ಭೇದಿಸಿರುವ ಪೊಲೀಸರು, ಚೀನಾದೊಂದಿಗೆ ಈ ಜಾಲ ಸಂಪರ್ಕ ಹೊಂದಿದೆ ಎಂಬ ಅಂಶವನ್ನು ಸೋಮವಾರ ಬಯಲಿಗೆಳೆದಿದ್ದಾರೆ.`ಸರಬರಾಜು ಮಾಡಲಾಗುತ್ತಿದ್ದ ಮಾದಕ ವಸ್ತುವಿನ ಗುಣಮಟ್ಟದ ಪರಿಶೀಲನೆಗಾಗಿ 2010ರ್ಲ್ಲಲಿ ಚಂಡೀಗಡಕ್ಕೆ ಐವರು ಚೀನಿಯರು ಭೇಟಿ ನೀಡಿದ್ದರು ಎಂಬ ಅಂಶ ದೃಢಪಟ್ಟಿದ್ದು, ಈ ಕುರಿತು ತನಿಖೆ ನಡೆಯಬೇಕಿದೆ' ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.`ಅಂತರರಾಷ್ಟ್ರೀಯ ಮಟ್ಟದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಈ ಮಾದಕ ವಸ್ತು ಜಾಲ ಇಂಗ್ಲೆಂಡ್, ನೆದರ್‌ಲೆಂಡ್, ಕೆನಡಾ, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದವರೆಗೆ ತನ್ನ ಕಬಂಧಬಾಹು ಚಾಚಿದೆ' ಎಂದು ಅವರು ಹೇಳಿದ್ದಾರೆ. ಫತೇಗಡ ಸಾಹಿಬ್ ಜಿಲ್ಲೆಯ ಪೊಲೀಸರು ಮಾರ್ಚ್‌ನಲ್ಲಿ ್ಙ 130 ಕೋಟಿ ಮೌಲ್ಯದ 26 ಕೆ.ಜಿ ಹೆರಾಯಿನ್ ವಶಪಡಿಸಿಕೊಂಡು ಅನಿವಾಸಿ ಭಾರತೀಯ ಅನೂಪ್ ಸಿಂಗ್ ಕಹ್ಲಾನ್ ಮತ್ತು ಸುನೀಲ್ ಕತ್ಯಾಲ್ ಎಂಬುವವರನ್ನು ಬಂಧಿಸಿದ್ದರು.ಬಂಧಿತರ ಹೇಳಿಕೆ ಮೇರೆಗೆ ತನಿಖೆ ನಡೆಸಿದ್ದ ಪೊಲೀಸರು, ಭಾರತದ ಅಂತರರಾಷ್ಟ್ರೀಯ ಖ್ಯಾತಿಯ ಬಾಕ್ಸರ್ ವಿಜೇಂದರ್ ಸಿಂಗ್ 12 ಬಾರಿ ಮತ್ತು  ಅವರ ಸಹೋದ್ಯೋಗಿ ರಾಮ್‌ಸಿಂಗ್ ಐದು ಬಾರಿ ಮಾದಕ ವಸ್ತು ಹೆರಾಯಿನ್ ಸೇವಿಸಿದ್ದಾರೆ ಎಂಬ ಅಂಶವನ್ನು ಭಾನುವಾರಷ್ಟೇ ಬಹಿರಂಗಪಡಿಸಿದ್ದರು. ಮಾದಕ ವಸ್ತು ಸಾಗಣೆಗೆ ಸಂಬಂಧಿಸಿದಂತೆ ಕೆನಡಾದ ಇಬ್ಬರು ಹಾಗೂ ಬ್ರಿಟನ್‌ನ ಒಬ್ಬ ಪ್ರಜೆ ಸೇರಿದಂತೆ ಪೊಲೀಸರು ಇದುವರೆಗೂ ಒಟ್ಟು 15 ಜನರನ್ನು ಬಂಧಿಸಿದ್ದು, 25ಕ್ಕೂ ಹೆಚ್ಚು ಮಂದಿ ತಲೆಮರೆಸಿಕೊಂಡಿದ್ದಾರೆ.ಪಂಜಾಬ್‌ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಸರಬ್ಜಿತ್ ಸಿಂಗ್, ಉತ್ತರ ಪ್ರದೇಶದ ಮೀರತ್‌ನಲ್ಲಿ  ಔಷಧ ಕಾರ್ಖಾನೆ ನಡೆಸುತ್ತಿರುವ ನಿವೃತ್ತ ಡಿಎಸ್‌ಪಿ ಕೃಪಾಲ್ ಸಿಂಗ್ ವಿರುದ್ಧ ಸಹ ಪ್ರಕರಣ ದಾಖಲಾಗಿದೆ. ಘಟನೆ ಬೆಳಕಿಗೆ ಬಂದಾಗಿನಿಂದ ಕೃಪಾಲ್ ಸಿಂಗ್‌ಅವರ ಮಗ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮಾದಕ ವಸ್ತು ಜಾಲ ಮತ್ತು ನಾಪತ್ತೆಯಾಗಿರುವವರ ಪತ್ತೆಗಾಗಿ ಪಂಜಾಬ್‌ನ ಹಲವು ನಗರಗಳು ಸೇರಿದಂತೆ ಉತ್ತರ ಪ್ರದೇಶ, ದೆಹಲಿ ಹಾಗೂ ಮುಂಬೈನಲ್ಲಿ ತನಿಖೆ ಆರಂಭಿಸಿದ್ದಾರೆ.

ಪ್ರತಿಕ್ರಿಯಿಸಿ (+)