ಚೀನಾ, ರಷ್ಯಾದಷ್ಟು ಭ್ರಷ್ಟವಲ್ಲ ಭಾರತ -ಸಮೀಕ್ಷೆ
ನವದೆಹಲಿ (ಪಿಟಿಐ): ಭ್ರಷ್ಟಾಚಾರ ಭಾರತದಲ್ಲೂ ಇದೆ. ಆದರೆ, ಚೀನಾ ಮತ್ತು ರಷ್ಯಾದಷ್ಟು ಭ್ರಷ್ಟಾಚಾರ ದೇಶದಲ್ಲಿ ಇಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ. ಜಾಗತಿಕ ಸಾಲ ಮೌಲ್ಯಮಾಪನ ಮಾಡುವ ಸಂಸ್ಥೆ ‘ಫಿಟ್ಚ್’ ಈ ಸಮೀಕ್ಷೆ ನಡೆಸಿದ್ದು, ವಿದೇಶಿ ಸಾಂಸ್ಥಿಕ ಹೂಡಿಕೆಗೆ ಸಂಬಂಧಿದಂತೆ ಭಾರತದಲ್ಲಿ ಬಿಗಿ ನಿಯಮಗಳು ಮತ್ತು ಅಷ್ಟೇ ಕಠಿಣವಾದ ತೆರಿಗೆ ಕಾಯ್ದೆ ಇದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾರತವು, ರಷ್ಯಾ ಮತ್ತು ಚೀನಾಕ್ಕಿಂತ ಹೆಚ್ಚಿನ ಕಾಳಜಿ ಹೊಂದಿದೆ ಎಂದು ‘ಫಿಟ್ಚ್’ನ ಕಾರ್ಪೊರೇಟ್ ಮೌಲ್ಯಮಾಪನ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ರಿಚರ್ಡ್ ಹಂಟರ್ ಹೇಳಿದ್ದಾರೆ.
‘2ಜಿ’ ತರಂಗಾಂತರ ಹಂಚಿಕೆ, ಆದರ್ಶ ಗೃಹ ನಿರ್ಮಾಣ, ಕಾಮನ್ವೆಲ್ತ್ ಕ್ರೀಡಾ ಕೂಟ, ದೇವದಾಸ್ ಅಂತರಿಕ್ಷ್ ಯೋಜನೆ ಸೇರಿದಂತೆ ಹಲವು ರಂಗಗಳಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಸಮೀಕ್ಷೆ ನಡೆದಿದೆ. ಆದಾಗ್ಯೂ, ಈ ಯಾವ ಸಂಗತಿಗಳೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು ಭಾರತದ ಷೇರುಪೇಟೆಯಿಂದ ಹಿಂದಕ್ಕೆ ಸರಿಯುವಂತೆ ಮಾಡಿಲ್ಲ. ಇಲ್ಲಿನ ಕಾನೂನಿನ ಮೇಲೆ ಹೂಡಿಕೆದಾರರಿಗೆ ನಂಬಿಕೆ ಇದೆ ಎಂದು ಹಂಟರ್ ಹೇಳಿದ್ದಾರೆ. ಹೂಡಿಕೆದಾರರಿಗೆ ಭಾರತದ ಮಾರುಕಟ್ಟೆ ಮೇಲೆ ವಿಶ್ವಾಸ ಹೆಚ್ಚಿದೆ ಎನ್ನುತ್ತದೆ ಸಮೀಕ್ಷೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.