ಚೀನಾ ವಿರುದ್ಧ ಕಿಡಿಕಾರಿದ ಅಮೆರಿಕ

ಬುಧವಾರ, ಜೂಲೈ 17, 2019
25 °C

ಚೀನಾ ವಿರುದ್ಧ ಕಿಡಿಕಾರಿದ ಅಮೆರಿಕ

Published:
Updated:

ವಾಷಿಂಗ್ಟನ್ (ಎಎಫ್‌ಪಿ): ಅಮೆರಿಕದ ರಹಸ್ಯಗಳನ್ನು ಜಗತ್ತಿನ ಎದುರು ತೆರೆದಿಟ್ಟ ಎಡ್ವರ್ಡ್ ಸ್ನೋಡೆನ್ ಹಾಂಗ್‌ಕಾಂಗ್‌ಗೆ ಪರಾರಿಯಾಗಿದ್ದ ಸಮಯದಲ್ಲಿ ಚೀನಾ ಅಗತ್ಯ ಮಾಹಿತಿ ನೀಡದೆ ಚೀನಾ ಅಸಹಕಾರ ತೋರಿದೆ ಎಂದು ಅಮೆರಿಕ ದೂರಿದೆ.ಚೀನಾದ ಈ ಧೋರಣೆ ಉಭಯ ದೇಶಗಳ ಬಾಂಧವ್ಯಕ್ಕೆ ಅಡ್ಡಿಯಾಗಿದೆ  ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

ವಾಷಿಂಗ್ಟನ್‌ನಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಜತೆ ಚೀನಾದ ಹಿರಿಯ ಅಧಿಕಾರಿಗಳು ಈಚೆಗೆ ಮಾತುಕತೆ ನಡೆಸಿದಾಗ, ಅಮೆರಿಕ ಸ್ನೋಡೆನ್ ವಿಚಾರದಲ್ಲಿ ತನ್ನ ಅಸಹನೆ ವ್ಯಕ್ತಪಡಿಸಿದೆ.ಸ್ನೋಡೆನ್ ಹಾಂಗ್‌ಕಾಂಗ್‌ನಲ್ಲಿ ತಲೆ ಮರೆಸಿಕೊಂಡಿದ್ದಾಗ ಚೀನಾ ಅಮೆರಿಕಕ್ಕೆ ಸಹಕಾರ ನೀಡಬೇಕಿತ್ತು. ಆಗ ಸ್ನೋಡೆನನ್ನು ಅಮೆರಿಕ ತನ್ನ ವಶಕ್ಕೆ ಸುಲಭವಾಗಿ ಪಡೆಯಬಹುದಿತ್ತು. ಆದರೆ, ಆ ಸಮಯದಲ್ಲಿ ಚೀನಾ ಮಾಹಿತಿ ನೀಡದೆ ರಹಸ್ಯ ಕಾಪಾಡಿಕೊಂಡಿತು ಎಂದು ಟೀಕಿಸಲಾಗಿದೆ.ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಚೀನಾದ ಅಧ್ಯಕ್ಷ ಗ್ಸಿ  ಜಿನ್‌ಪಿಂಗ್ ಕ್ಯಾಲಿಫೋರ್ನಿಯಾದ ರೆಸಾರ್ಟ್‌ನಲ್ಲಿ ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಮಾತುಕತೆ ನಡೆಸಿದ್ದರು. ಆದರೆ, ಸ್ನೋಡೆನ್ ವಿಚಾರದಲ್ಲಿ ಚೀನಾ ನಡೆದುಕೊಂಡ ರೀತಿಯಿಂದಾಗಿ ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆ ಉಂಟಾಯಿತು.ಇದು ಅಮೆರಿಕಕ್ಕೆ ತೀವ್ರ ನಿರಾಸೆ ತಂದಿದೆ ಎಂದು ಅಮೆರಿಕದ ಉಪ ಕಾರ್ಯದರ್ಶಿ ವಿಲಿಯಮ್ ಬರ್ನ್ಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆದರೆ, ಸ್ನೋಡೆನ್ ವಿಚಾರದಲ್ಲಿ ತನ್ನ ದೇಶದ ಕಾನೂನಿನಂತೆ ನಡೆದುಕೊಂಡಿದೆ ಎಂದು ಚೀನಾ ಸಮರ್ಥಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry