ಚೀನಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

7

ಚೀನಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Published:
Updated:

 


ದೋಹಾ (ಐಎಎನ್‌ಎಸ್): ಹಾಲಿ ಚಾಂಪಿಯನ್ ಭಾರತ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯಿತು. ಗುರುವಾರ ನಡೆದ ಮೊದಲ ಪಂದ್ಯದಲ್ಲಿ 4-0ಗೋಲುಗಳಿಂದ ಚೀನಾ ಎದುರು ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿತು.

 

ಭಾರತ ತಂಡದ ಆಟಗಾರ ಕನ್ನಡಿಗ ಎಸ್.ವಿ. ಸುನಿಲ್ 13ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. `ಡ್ರ್ಯಾಗ್‌ಫ್ಲಿಕ್ಕರ್' ವಿ.ಆರ್. ರಘುನಾಥ್ 17 ಮತ್ತು 52ನೇ ನಿಮಿಷದಲ್ಲಿ ಗೋಲು ಕಲೆ ಹಾಕಿ ಗೆಲುವಿನ ಅಂತರ ಹೆಚ್ಚಿಸಿದರು. 52ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಬೀರೇಂದ್ರ ಲಾಕ್ರಾ ಗೆಲುವನ್ನು ಸುಲಭಗೊಳಿಸಿದರು. 

 

ಸರ್ದಾರ್ ಸಿಂಗ್ ನೇತೃತ್ವದ ಭಾರತ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಜಪಾನ್ ಎದುರು ಪೈಪೋಟಿ ನಡೆಸಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry