ಚೀನಾ ಸೇನಾ ಬಲ ಹೆಚ್ಚಳ ಸೃಷ್ಟಿಸಿದ ಆತಂಕ

7

ಚೀನಾ ಸೇನಾ ಬಲ ಹೆಚ್ಚಳ ಸೃಷ್ಟಿಸಿದ ಆತಂಕ

Published:
Updated:

ವಾಷಿಂಗ್ಟನ್ (ಪಿಟಿಐ): ಚೀನಾ ತನ್ನ ಅಗತ್ಯಕ್ಕಿಂತ ಹೆಚ್ಚು ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ ಮತ್ತು ಏಷ್ಯಾ ಖಂಡದ ರಾಷ್ಟ್ರಗಳು, ಈ ನಿಟ್ಟಿನಲ್ಲಿ ಪಾರದರ್ಶಕ ನೀತಿ ಅನುಸರಿಸಲು ಸಲಹೆ ನೀಡಿವೆ.ಚೀನಾ ವಶದಲ್ಲಿ ‘ಪ್ರವೇಶ ತಡೆ’ (ಆ್ಯಂಟಿ ಅಕ್ಸೆಸ್-ಎ 2) ಹಾಗೂ ‘ಪ್ರವೇಶ ನಿರ್ಬಂಧ’ (ಆ್ಯಂಟಿ ಡಿನಿಯಲ್-ಎಡಿ) ತಂತ್ರಜ್ಞಾನ ಮುಂತಾದವುಗಳು ಅಮೆರಿಕ ಮತ್ತಿತರ ರಾಷ್ಟ್ರಗಳ ನಿದ್ದೆ ಕೆಡಿಸಿವೆ. ಈ ಸಲಕರಣೆಗಳು ನಿರ್ದಿಷ್ಟ ಸಮುದ್ರ, ವಾಯುಪ್ರದೇಶದಲ್ಲಿ ಅನ್ಯ ದೇಶಗಳ ಸಂವಹನ ಜಾಲ, ಇನ್ನಿತರ ರಕ್ಷಣಾತ್ಮಕ ಚಟುವಟಿಕೆ, ಸಲಕರಣೆಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಚೀನಾ ತನ್ನ ರಕ್ಷಣಾತ್ಮಕ ಅಗತ್ಯಕ್ಕಿಂತ ಹೆಚ್ಚು ಇಂತಹ ಶಸ್ತ್ರಾಸ್ತ್ರಗಳನ್ನು ಹೊಂದಿರುವುದರ ಬಗ್ಗೆ ಅಮೆರಿಕ ತನ್ನ ಆತಂಕವನ್ನು ನೆರೆಯ ಸಮಾನ ಮನಸ್ಕ ದೇಶಗಳೊಂದಿಗೆ ಹಂಚಿಕೊಂಡಿದೆ ಎಂದು ಏಷ್ಯಾ ಪೆಸಿಫಿಕ್ ಪ್ರದೇಶದ ರಕ್ಷಣಾ ಕಾರ್ಯದರ್ಶಿ ವಾಲೇಸ್ ಗ್ರೆಗ್‌ಸನ್ ತಿಳಿಸಿದರು.ಚೀನಾ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿಸಿಕೊಂಡಿರುವ ರಕ್ಷಣಾ ಸಲಕರಣೆಗಳಿಂದ ಪ್ರದೇಶದಲ್ಲಿ  ಭದ್ರತಾ ಸಮತೋಲಕ್ಕೆ ಧಕ್ಕೆಯಾಗಬಹುದು. ಸುತ್ತಲಿನ ಜಲಪ್ರದೇಶದ ಮೇಲೆ ಪ್ರಭಾವ ಬೀರುವಂತಹ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಅದು ಹೆಚ್ಚಿಸಿ ಕೊಂಡಿದೆ. ಇದು ನೆರೆಯ ರಾಷ್ಟ್ರಗಳ ಕಳವಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.ಚೀನಾ ಕನಿಷ್ಠ ಪಕ್ಷ ತನ್ನ ರಕ್ಷಣಾ ಚಟುವಟಿಕೆ, ಶಸ್ತ್ರಾಸ್ತ್ರ ಕ್ರೋಡೀಕರಣ, ಖರ್ಚುವೆಚ್ಚಗಳ ಬಗ್ಗೆ ಪಾರದರ್ಶಕತೆ ಹೊಂದಬೇಕು ಎಂದು ಗ್ರೆಗ್‌ಸನ್ ತಿಳಿಸಿದರು.ಕ್ಯಾಲಿಫೊರ್ನಿಯಾ ವಾಷಿಂಗ್ಟನ್ ಸೆಂಟರ್ ವಿಶ್ವವಿದ್ಯಾಲಯದಲ್ಲಿ ಚೀನಾ ಕುರಿತ ವಿಚಾರ ಸಂಕಿರಣದಲ್ಲಿ ಅವರುಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry