ಮಂಗಳವಾರ, ಡಿಸೆಂಬರ್ 10, 2019
16 °C

ಚೀನಾ ಹೊಸ ವರ್ಷ: ಮಹಾ ವಲಸೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀನಾ ಹೊಸ ವರ್ಷ: ಮಹಾ ವಲಸೆ ಆರಂಭ

ಬೀಜಿಂಗ್ (ಪಿಟಿಐ): ಹೊಸ ವರ್ಷದ ಆಚರಣೆಗಾಗಿ ಚೀನಾದ ನಗರಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ವಲಸೆ ಕಾರ್ಮಿಕರು ಮತ್ತೆ ತಮ್ಮ ತಮ್ಮ ಗ್ರಾಮಗಳಿಗೆ ಹಿಂತಿರುಗಲು ಭಾನುವಾರ ಆರಂಭಿಸಿದ್ದಾರೆ.

ಚೀನಾದಾದ್ಯಂತ ಸುಗಮ ಸಾರಿಗೆ ವ್ಯವಸ್ಥೆಗೆ ಅಡಚಣೆಯನ್ನುಂಟು ಮಾಡುವ  ಈ ಪ್ರಕ್ರಿಯೆಯನ್ನು ವಾರ್ಷಿಕವಾಗಿ ನಡೆಯುವ ವಿಶ್ವದ ಅತಿ ದೊಡ್ಡ `ಮಾನವ ವಲಸೆ~ ಎಂದೂ ಕರೆಯಲಾಗುತ್ತದೆ.

ಚೀನಾ ಚಾಂದ್ರಮಾನ ಹೊಸ ವರ್ಷಾಚರಣೆ ಅಂಗವಾಗಿ ನಡೆಯುವ ಬೇಸಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಭಾನುವಾರ ಒಂದೇ ದಿನ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಆರಂಭಿಸಿದ್ದಾರೆ.

ಈ ವರ್ಷ ಜನವರಿ 23ರಂದು ಚೀನಾದ ಹೊಸ ವರ್ಷದ ದಿನವಾಗಿದ್ದು, ಚೀನಾದಾದ್ಯಂತ ನೆಲೆಸಿರುವ ನಾಗರಿಕರು ತಮ್ಮ  ಊರುಗಳಿಗೆ ಹಿಂದಿರುಗಿ ಕುಟುಂಬದೊಂದಿಗೆ ಒಂದು ವಾರದ ಕಾಲ ನಡೆಯುವ ಉತ್ಸವದಲ್ಲಿ ಭಾಗವಹಿಸುತ್ತಾರೆ. ಒಟ್ಟು 40 ದಿನಗಳ ಅವಧಿಯಲ್ಲಿ ಸುಮಾರು 31.6 ಕೋಟಿ ಜನರು ವಿವಿಧ ಸಾರಿಗೆ ವ್ಯವಸ್ಥೆಗಳನ್ನು ಬಳಸುವ ನಿರೀಕ್ಷೆ ಇದೆ.

ಪ್ರತಿಕ್ರಿಯಿಸಿ (+)