ಚೀನೀ ಸೇನೆಯ ಆಧುನೀಕರಣಕ್ಕೆ ಭಾರತ ತಲೆ ಕೆಡಿಸಿಕೊಳ್ಳದು: ಆಂಟನಿ

7

ಚೀನೀ ಸೇನೆಯ ಆಧುನೀಕರಣಕ್ಕೆ ಭಾರತ ತಲೆ ಕೆಡಿಸಿಕೊಳ್ಳದು: ಆಂಟನಿ

Published:
Updated:

ನವದೆಹಲಿ (ಐಎಎನ್‌ಎಸ್): ಚೀನಾ ಸೈನ್ಯವು ಆಧುನೀಕರಣಗೊಳ್ಳುತ್ತಿರುವ ಕುರಿತು ಭಾರತವು ಅನಗತ್ಯವಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಬುಧವಾರ ಇಲ್ಲಿ ಹೇಳಿದರು.ರಕ್ಷಣಾ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಚೀನಾ ಸೈನ್ಯ ಬಲವರ್ಧನೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆಂಟನಿ ‘ಸತತವಾಗಿ ಏರುತ್ತಿರುವ ಚೀನಾ ಸೈನ್ಯದ ವೆಚ್ಚ ಒಂದು ಗಂಭೀರ ವಿಷಯ. ಆದರೂ ಈ ಕುರಿತು ಭಾರತ ಅನಗತ್ಯವಾಗಿ ಭಯ ಬೀಳುವುದಿಲ್ಲ, ಏಕೆಂದರೆ ಸೈನ್ಯಕ್ಕೆ ಅಗತ್ಯವಾದ ಎಲ್ಲ ಆಧುನಿಕ ಸೌಲಭ್ಯಗಳನ್ನು ನಾವು ಹೊಂದಿದ್ದೇವೆ’ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ನುಡಿದರು.

 ‘ನಮ್ಮ ಸೈನ್ಯದ ಸಾಮರ್ಥ್ಯವನ್ನು ಮತ್ತು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ಕೆಲಸ ಪ್ರಾರಂಭಿಸಿದ್ದು, ಭಾರತ ಸರ್ಕಾರವು ಸಹ ತನ್ನ ಸೈನ್ಯವನ್ನು ಆಧುನೀಕರಣಗೋಳಿಸುತ್ತಿದೆ. ಯಾವುದೇ ಭಾಗದಿಂದ ಎದುರಾಗುವ ಸವಾಲನ್ನು ಎದುರಿಸಲು ಸಾಧ್ಯವಾಗುವಂತೆ ಗಡಿಭಾಗದಲ್ಲಿರುವ ಸೈನ್ಯವನ್ನು ಬಲಿಷ್ಠಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.ನಾವು ಸದಾಕಾಲ ಸೈನ್ಯದ ಆಧುನೀಕರಣವನ್ನು ಪರಿಶೀಲಿಸುತ್ತಿದ್ದು, ಅದರಲ್ಲಿ ಕಂಡ್ಗುರುವ ಕೊರತೆಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ  ಜತೆಗೆ  ಸದಾಕಾಲ ಸೈನ್ಯವನ್ನು ಎಚ್ಚರದಿಂದಿಡುವ ಅಗತ್ಯವಿದೆ ಎಂದು ಆಂಟನಿ ತಿಳಿಸಿದರು.

ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಚೀನಾ-ಭಾರತ ಗಡಿ ಸಮಸ್ಯೆ ಕುರಿತು ಆಂಟನಿ ‘ಗಡಿ ಸಮಸ್ಯೆಯು ಸಂಕೀರ್ಣ ವಿಷಯವಾಗಿದ್ದು, ಅದು ಕೇವಲ ಮಾತುಕತೆ ಮತ್ತು ಚರ್ಚೆಗಳ ಮೂಲಕ ್ಗಗೆಹರಿಯುವಂತಹದು’ಎಂದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry