ಚೀರ್ ಗರ್ಲ್ಸ್ ಕ್ರಿಕೆಟ್ ಮ್ಯಾನ್

7

ಚೀರ್ ಗರ್ಲ್ಸ್ ಕ್ರಿಕೆಟ್ ಮ್ಯಾನ್

Published:
Updated:
ಚೀರ್ ಗರ್ಲ್ಸ್ ಕ್ರಿಕೆಟ್ ಮ್ಯಾನ್

 ಒಂದು ಕಡೆ ಲಯ ಬದ್ಧವಾದ ಸಂಗೀತ, ಮತ್ತೊಂದೆಡೆ ಸಂಗೀತಕ್ಕೆ ತಕ್ಕಂತೆ  ನೃತ್ಯ... ಅಲ್ಲೊಂದು ಅದ್ಭುತ ಲೋಕವೇ ಸೃಷ್ಟಿಯಾಗಿತ್ತು. ಒಂದು ಕ್ಷಣ ಹುಡುಗಿಯರೇ ಮೈಮರೆಯಬೇಕು. ಅಂತಹ ಮೈಬಳುಕುವ ಆಕರ್ಷಕ ನೃತ್ಯವದು. ಇನ್ನು ಪಡ್ಡೆ ಹೈಕಳ ಹೃದಯ ಝಲ್ ಎನ್ನದೆ?

 ಈ ಚಮತ್ಕಾರ ಮಾಡಿದವರು ಐಪಿಎಲ್ ಕ್ರಿಕೆಟ್‌ನ ಪ್ರಮುಖ ಆಕರ್ಷಣೆ ವೈಟ್ ಮಿಸ್ಚೀಫ್ ಚೀರ್ ಗರ್ಲ್ಸ್ ತಂಡದವರು.  ರಾಯಲ್ ಚಾಲೆಂಜರ್ಸ್‌ ತಂಡಕ್ಕೆ ಬೆಂಬಲ ನೀಡಲು ಈ ಹುಡುಗಿಯರು ತಯಾರಾಗಿದ್ದಾರೆ.



ತುಂಡು ನೀಲಿ ಚೆಡ್ಡಿ, ಗ್ರೇ ಕಲರ್ ಟಾಪ್ ಹಾಕಿ ಟಿಪ್‌ಟಾಪ್ ಆಗಿದ್ದಾರೆ. ಕೈಯಲ್ಲಿ ಬಣ್ಣದ ಪ್ರಾಪ್ಸ್ ಹಿಡಿದು ನೃತ್ಯ ಮಾಡಲು ಶುರು ಮಾಡಿದರೆ ನೋಡುಗರು ಕ್ಲೀನ್ ಬೌಲ್ಡ್. ಇವರು ಆಟಕ್ಕೆ ಬೆಡಗು, ಚೆಲ್ಲಾಟ ಮತ್ತು ರೋಮಾಂಚನ ತುಂಬಲಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದರ ಒಂದು ಝಲಕ್ ಪ್ರದರ್ಶಿಸಿದರು.



ಮರು ದಿನ ಇದೇ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಹಾಡುತ್ತ, ಕುಣಿಯುತ್ತ, ಒಬ್ಬರನ್ನೊಬ್ಬರು ಛೇಡಿಸುತ್ತ ಫೋಟೊ ಸೆಷನ್‌ನಲ್ಲಿ ಪಾಲ್ಗೊಂಡರು. ಸುಂದರ ಭಂಗಿಗಳನ್ನು ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry