ಮಂಗಳವಾರ, ನವೆಂಬರ್ 12, 2019
28 °C

ಚುಟುಕು ಆಟಕ್ಕೆ ವಿಶೇಷ ಕಾರ್ಯಕ್ರಮ

Published:
Updated:

ನವದೆಹಲಿ (ಪಿಟಿಐ): ಐಪಿಎಲ್ ಟೂರ್ನಿ ಎಂದಾಗ ಅಲ್ಲಿ ಬಣ್ಣದ ಲೋಕ, ಮೋಜು-ಮಸ್ತಿಗೇನೂ ಕೊರತೆ ಇರುವುದಿಲ್ಲ. ಇದರ ಬಗ್ಗೆಯೇ ನ್ಯಾಷನಲ್ ಜಿಯೋಗ್ರಾಫಿಕ್  ವಾಹಿನಿಯು `ಇನ್‌ಸೈಡ್ ಐಪಿಎಲ್' ಎಂಬ ಹೆಸರಿನಲ್ಲಿ ಸಾಕ್ಷ್ಯಚಿತ್ರಗಳ ಸರಣಿ ಪ್ರಸಾರ ಮಾಡಲಿದೆ.ಈ ಕುರಿತು ಪ್ರಕಟಣೆಯೊಂದನ್ನು ಹೊರಡಿಸಿರುವ ಬಿಸಿಸಿಐ, `ಐಪಿಎಲ್‌ನ ಯಶಸ್ಸಿನ ಒಳಗುಟ್ಟು ಏನು ಎಂಬ ಬಗ್ಗೆ ಹಲವಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಗಳಿಗೆ ನ್ಯಾಷನಲ್ ಜಿಯೋಗ್ರಾಫಿ ವಾಹಿನಿಯು ಉತ್ತರಿಸಲಿದೆ. ಟೂರ್ನಿಯ ಹಿಂದಿರುವ ವ್ಯವಸ್ಥೆಯ ಬಗ್ಗೆ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗಲಿವೆ' ಎಂದು ಹೇಳಿದೆ.ಈ ವರ್ಷದ ಕೊನೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.ಪ್ರತಿಕ್ರಿಯಿಸಿ (+)