ಚುಟುಕು ಗುಟುಕು : ಕ್ರೀಡಾ ಸುದ್ದಿ

7

ಚುಟುಕು ಗುಟುಕು : ಕ್ರೀಡಾ ಸುದ್ದಿ

Published:
Updated:

ಕಿವೀಸ್ ತಂಡಕ್ಕೆ ಬಾಂಡ್ ಕೋಚ್

ವೆಲ್ಲಿಂಗ್ಟನ್ (ಎಎಫ್‌ಪಿ): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನೂತನ ಬೌಲಿಂಗ್ ಕೋಚ್ ಆಗಿ ಮಾಜಿ ವೇಗಿ ಶೇನ್ ಬಾಂಡ್ ಶುಕ್ರವಾರ ನೇಮಕವಾಗಿದ್ದಾರೆ.ಕಠಿಣ ತಂಡಗಳ ಎದುರು ಕಿವೀಸ್ ಈ ವರ್ಷ ಹಾಗೂ ನಂತರದಲ್ಲಿ ಟೆಸ್ಟ್ ಸರಣಿಗಳನ್ನು ಆಡಬೇಕಿದೆ. ಈ ವೇಳೆ ಬಾಂಡ್ ತಂಡದ ಬೌಲಿಂಗ್ ಕೋಚ್ ಆಗಿರುವುದರಿಂದ ಅವರ ಮುಂದೆ ದೊಡ್ಡ ಜವಾಬ್ದಾರಿ ಇದೆ.ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಡಿಸೆಂಬರ್‌ನಲ್ಲಿ, ಮುಂದಿನ ವರ್ಷದ ಫೆಬ್ರುವರಿಯಲ್ಲಿ ಇಂಗ್ಲೆಂಡ್ ಎದುರು ಟೆಸ್ಟ್ ಸರಣಿಗಳನ್ನು ಆಡಲಿದೆ. ಒಂಬತ್ತು ವರ್ಷದ ಅವಧಿಯಲ್ಲಿ ಶೇನ್‌ಬಾಂಡ್  ಕೇವಲ 18 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.2019ರ ಏಷ್ಯನ್ ಕ್ರೀಡಾಕೂಟದ ಸ್ಥಳ ನಿಗದಿಗೆ 8ರಂದು ಸಭೆ


ಮುಂಬೈ (ಪಿಟಿಐ): 2019ರ ಏಷ್ಯನ್ ಕ್ರೀಡಾಕೂಟಗಳನ್ನು ನಡೆಸುವ ಸ್ಥಳವನ್ನು ನಿಗದಿ ಮಾಡಲು ಏಷ್ಯಾ ಒಲಿಂಪಿಕ್ ಮಂಡಳಿ (ಒಸಿಎ) ನವೆಂಬರ್ 8ರಂದು ಸಭೆ ಸೇರಲಿದೆ.ಏಷ್ಯನ್ ಕ್ರೀಡಾಕೂಟದ ಆತಿಥ್ಯ ವಹಿಸಿಕೊಳ್ಳಲು ಸುರಾಬಯ (ಇಂಡೋನೇಷ್ಯಾ), ಹನೋಯ್ (ವಿಯೆಟ್ನಾಂ) ಹಾಗೂ ದುಬೈ (ಯುನೈಟೆಡ್ ಅರಬ್ ಎಮಿರೇಟಸ್) ಸ್ಪರ್ಧೆಯಲ್ಲಿವೆ.`ಎಂಟರಂದು ನಡೆಯುವ ಸಭೆಯಲ್ಲಿ 18ನೇ ಏಷ್ಯನ್ ಕ್ರೀಡಾಕೂಟದ ಸ್ಥಳ ನಿಗದಿ ವಿಚಾರವೇ ಪ್ರಮುಖ ವಿಷಯವಾಗಿದೆ~ ಎಂದು ಒಸಿಎ ಮೂಲಗಳು ತಿಳಿಸಿವೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry