ಚುಟುಕು ಗುಟುಕು ಕ್ರೀಡಾ ಸುದ್ದಿಗಳು

7

ಚುಟುಕು ಗುಟುಕು ಕ್ರೀಡಾ ಸುದ್ದಿಗಳು

Published:
Updated:

ವಾಲಿಬಾಲ್: ಎಲ್‌ಐಸಿಗೆ ಜಯ

ಬಂಗಾರಪೇಟೆ:
ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ) ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ವಾಲಿಬಾಲ್ ಲೀಗ್‌ನ ಮೂರನೇ ಹಂತದ ಟೂರ್ನಿಯ ಪಂದ್ಯದಲ್ಲಿ ಜಯ ಸಾಧಿಸಿದರು.ಸೋಮವಾರ ಎಲ್‌ಐಸಿ 25-15, 18-25, 25-15, 25-18 ರಲ್ಲಿ ಎಂಇಜಿ ತಂಡವನ್ನು ಮಣಿಸಿತು. ಇತರ ಪಂದ್ಯಗಳಲ್ಲಿ ಎಎಸ್‌ಸಿ 25-16, 25-16, 25-17 ರಲ್ಲಿ ಕೆಎಸ್‌ಪಿ ವಿರುದ್ಧವೂ, ಬಿಎಸ್‌ಎನ್‌ಎಲ್ 25-21, 17-25, 25-19, 25-22 ರಲ್ಲಿ ಡಿವೈಎಸ್‌ಎಸ್ ಎದುರೂ ಗೆಲುವು ಪಡೆದವು.ಟೆನ್‌ಪಿನ್ ಬೌಲಿಂಗ್: ಮುನ್ನಡೆಯಲ್ಲಿ ಐಶ್ವರ್ಯಾ

ಬೆಂಗಳೂರು:
ಕರ್ನಾಟಕದ ಐಶ್ವರ್ಯಾ ರಾವ್ ಇಲ್ಲಿ ನಡೆಯುತ್ತಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಮುನ್ನಡೆ ಸಾಧಿಸಿದ್ದಾರೆ.ಒರಾಯನ್ ಮಾಲ್‌ನ `ಬ್ಲೂ-ಒ' ಬೌಲಿಂಗ್ ಸೆಂಟರ್‌ನಲ್ಲಿ ಸೋಮವಾರ ನಡೆದ ಆರು ಗೇಮ್‌ಗಳಲ್ಲಿ ಅವರು ಒಟ್ಟು 1080 ಪಾಯಿಂಟ್‌ಗಳನ್ನು ಕಲೆಹಾಕಿದರು. ದೆಹಲಿಯ ಅನುರಾಧಾ (1074) ಎರಡನೇ ಸ್ಥಾನದಲ್ಲಿದ್ದಾರೆ.ಕ್ರಿಕೆಟ್: ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ

ಬೆಂಗಳೂರು:
ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ಕೂಚ್ ಬೆಹಾರ್ ಟ್ರೋಫಿ 19 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡದ ವಿರುದ್ಧ ಇನಿಂಗ್ಸ್ ಮುನ್ನಡೆ ಪಡೆದಿದೆ.ಕರ್ನಾಟಕದ 618 ರನ್‌ಗಳಿಗೆ ಉತ್ತರವಾಗಿ ಹಿಮಾಚಲ ಪ್ರದೇಶ ಮೂರನೇ ದಿನವಾದ ಸೋಮವಾರ ಮೊದಲ ಇನಿಂಗ್ಸ್‌ನಲ್ಲಿ 188 ರನ್‌ಗಳಿಗೆ ಆಲೌಟಾಯಿತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಪ್ರವಾಸಿ ತಂಡ ಒಂದು ವಿಕೆಟ್‌ಗೆ 200 ರನ್ ಪೇರಿಸಿದೆ.ಸಂಕ್ಷಿಪ್ತ ಸ್ಕೋರ್: ಕರ್ನಾಟಕ: ಮೊದಲ ಇನಿಂಗ್ಸ್ 5 ವಿಕೆಟ್‌ಗೆ 618 ಡಿಕ್ಲೇರ್ಡ್; ಹಿಮಾಚಲ ಪ್ರದೇಶ: ಮೊದಲ ಇನಿಂಗ್ಸ್ 52.5 ಓವರ್‌ಗಳಲ್ಲಿ 188 (ಅಂಕುಶ್ 95, ಜೆ ಸುಚಿತ್ 67ಕ್ಕೆ 5) ಮತ್ತು ಎರಡನೇ ಇನಿಂಗ್ಸ್ 49 ಓವರ್‌ಗಳಲ್ಲಿ 1 ವಿಕೆಟ್‌ಗೆ 200 (ಪ್ರಯಾನ್ಶು ಖಂಡೂರಿ ಬ್ಯಾಟಿಂಗ್ 103, ಅಂಕುಶ್ 65)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry