ಶುಕ್ರವಾರ, ಜೂನ್ 18, 2021
29 °C

ಚುಟುಕು ಗುಟುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆನಿಸ್‌: ಮೈನೇನಿಗೆ ಪ್ರಶಸ್ತಿ

ಭೀಮಾವರಂ, ಆಂಧ್ರಪ್ರದೇಶ (ಪಿಟಿಐ): ಭಾರತ ಡೇವಿಸ್‌ ಕಪ್‌ ತಂಡದ ಆಟಗಾರ ಸಾಕೇತ್‌ ಮೈನೇನಿ ಇಲ್ಲಿ ನಡೆದ ₨ 6.2 ಲಕ್ಷ ಬಹುಮಾನ ಮೊತ್ತದ ಐಟಿಎಫ್‌ ಫ್ಯೂಚರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.ಭಾನುವಾರ ನಡೆದ ಫೈನಲ್‌ನಲ್ಲಿ ಮೈನೇನಿ 4–6, 6–3, 6–1ರಲ್ಲಿ ಸನಮ್‌ ಸಿಂಗ್‌ ಅವರನ್ನು ಮಣಿಸಿದರು. ಮೈನೇನಿ ಮೊದಲ ಸೆಟ್‌ನಲ್ಲಿ ಎಡವಿದರು. ಆದರೆ ನಂತರದ ಎರಡೂ ಸೆಟ್‌ಗಳಲ್ಲಿ ಅವರು ಮಿಂಚು ಹರಿಸಿದರು. 10 ಏಸ್‌ಗಳನ್ನು ಸಿಡಿಸಿದ ಮೈನೇನಿ ತಮ್ಮ ಡಬಲ್ಸ್‌ ಜೊತೆಗಾರರೂ ಆಗಿರುವ ಸನಮ್‌ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.ಇದು ಮೈನೇನಿಗೆ ಈ ವಾರ ಲಭಿಸಿದ ಎರಡನೇ ಪ್ರಶಸ್ತಿ. ಶುಕ್ರವಾರ ಅವರು ಸನಮ್‌ ಜೊತೆಗೂಡಿ ಡಬಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದರು.ವೇಟ್‌ಲಿಫ್ಟಿಂಗ್‌: ಚಾನುಗೆ 3 ಬೆಳ್ಳಿ

ನವದೆಹಲಿ (ಪಿಟಿಐ): ಸಾಯಿಕೋಮ್‌ ಮಿರಾಭಾಯಿ ಚಾನು ಅವರು ಥಾಯ್ಲೆಂಡ್‌ನ ಬ್ಯಾಂಗ್‌ಸಾಯಿನ್‌ನಲ್ಲಿ ನಡೆಯುತ್ತಿರುವ ಏಷ್ಯಾ ಜೂನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬೆಳ್ಳಿ ಪದಕ ಗೆದ್ದಿದ್ದಾರೆ.ಯುವತಿಯರ 48 ಕೆ.ಜಿ.ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಚಾನು ಸ್ನ್ಯಾಚ್‌ನಲ್ಲಿ 75 ಕೆ.ಜಿ., ಕ್ಲೀನ್‌ ಹಾಗೂ ಜರ್ಕ್‌ನಲ್ಲಿ  93 ಕೆ.ಜಿ. ಸೇರಿದಂತೆ ಒಟ್ಟು 168 ಕೆ.ಜಿ. ಭಾರ ಎತ್ತಿದರು. ಪುರುಷರ 56 ಕೆ.ಜಿ ವಿಭಾಗದಲ್ಲಿ ಅಪೂರ್ವ ಚೆಟಿಯಾ ಆರನೇ ಸ್ಥಾನ ಗಳಿಸಿದರು.ಶೂಟಿಂಗ್‌: ಪೂಜಾಗೆ ಚಿನ್ನದ ಪದಕ

ನವದೆಹಲಿ (ಪಿಟಿಐ): ಭರವಸೆಯ ಶೂಟರ್‌ ಭಾರತದ ಪೂಜಾ ಘಾಟ್ಕರ್‌ ಅವರು ಕುವೈತ್‌ನಲ್ಲಿ ನಡೆಯುತ್ತಿರುವ ಏಳನೇ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.ಭಾನುವಾರ ನಡೆದ ಮಹಿಳೆಯರ ಏರ್‌ ರೈಫಲ್‌ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಪೂಜಾ ಈ ವಿಭಾಗದಲ್ಲಿ 413.1 ಪಾಯಿಂಟ್‌ ಕಲೆಹಾಕಿದರು. ಫೈನಲ್‌ನಲ್ಲಿ 208.8 ಪಾಯಿಂಟ್‌ ಗಳಿಸಿದ ಅವರು ಚೀನಾದ ಡಿ ಯು ಬೆಜ್‌ (207.2 ಪಾಯಿಂಟ್‌) ಅವರನ್ನು ಮಣಿಸಿದರು.ತಂಡ ವಿಭಾಗದಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತು. ಪೂಜಾ, ಅಪೂರ್ವಿ ಚಾಂಡೇಲಾ ಹಾಗೂ ಅಯೋನಿಕಾ ಪಾಲ್‌ ಅವರು ಈ ತಂಡದಲ್ಲಿದ್ದರು. ಈ ವಿಭಾಗದ ಬಂಗಾರದ ಪದಕ ಚೀನಾದ ಪಾಲಾಯಿತು. ಸೌದಿ ಅರೇಬಿಯಾ ಎರಡನೇ ಸ್ಥಾನ ಪಡೆಯಿತು.ಪುರುಷರ ವಿಭಾಗದ ಪಿಸ್ತೂಲ್‌ ವಿಭಾಗದಲ್ಲಿ ಸಮರೇಶ್‌ ಜಂಗ್‌ ಹಾಗೂ ಪಿ.ಎನ್‌.ಪ್ರಕಾಶ್‌ ಫೈನಲ್‌ ತಲುಪಿದ್ದಾರೆ. ಜಂಗ್‌ ಅರ್ಹತಾ ಸುತ್ತಿನಲ್ಲಿ 576 ಹಾಗೂ ಅಂತಿಮ ಸುತ್ತಿನಲ್ಲಿ 119.4 ಪಾಯಿಂಟ್‌ ಗಳಿಸಿದರು. ಪ್ರಕಾಶ್‌ ಅರ್ಹತಾ ಸುತ್ತಿನಲ್ಲಿ 581 ಹಾಗೂ ಅಂತಿಮ ಸುತ್ತಿನಲ್ಲಿ 98.2 ಪಾಯಿಂಟ್‌ ಕಲೆಹಾಕಿದರು.ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಜಂಗ್‌ (576), ರೈ (575) ಹಾಗೂ ಕರ್ನಾಟಕದ ಪ್ರಕಾಶ್‌ (581) ಅವರನ್ನೊಳಗೊಂಡ ಭಾರತ ತಂಡ ಬೆಳ್ಳಿ ಪದಕ ಜಯಿಸಿತು. ಚಿನ್ನದ ಪದಕ ಚೀನಾ ಪಾಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.