ಚುಟುಕು ಗುಟುಕು

6

ಚುಟುಕು ಗುಟುಕು

Published:
Updated:

ಬಿಲಿಯರ್ಡ್ಸ್: ಪಂಕಜ್ ಅಡ್ವಾಣಿ ಶುಭಾರಂಭ

ಮುಂಬೈ (ಪಿಟಿಐ): ಭಾರತದ ಪಂಕಜ್ ಅಡ್ವಾಣಿ ಇಂಗ್ಲೆಂಡ್‌ನ ಲೀಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.ಬೆಂಗಳೂರಿನ ಅಡ್ವಾಣಿ 874-147ರಲ್ಲಿ ಆಸ್ಟ್ರಿಯದ ಮಾರ್ಟಿನ್ ಶ್ಮಿಟ್ ಎದುರು ಜಯ ಗಳಿಸಿದರು.

ವಿಶ್ವ ಬಿಲಿಯರ್ಡ್ಸ್ ರನ್ನರ್ ಅಪ್ ಧ್ರುವ್ ಸಿತ್ವಾಲಾ 702-134ರಲ್ಲಿ ಇಂಗ್ಲೆಂಡ್‌ನ ರ‌್ಯಾನ್ ಮೀಯರ್ಸ್‌ ಅವರನ್ನು ಮಣಿಸಿದರು. ಮಾಜಿ ವಿಶ್ವ ಚಾಂಪಿಯನ್ ಗೀತ್ ಸೇಠಿ 687-168ರಲ್ಲಿ ಇಂಗ್ಲೆಂಡ್‌ನ ಜೊನಾಥನ್ ಇವಾನ್ಸ್ ಎದುರು ಗೆದ್ದರು.ವಾಲಿಬಾಲ್: ಎಂಇಜಿ, ಕೆಎಸ್‌ಪಿಗೆ ಗೆಲುವು

ಬೆಂಗಳೂರು: ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಹಾಗೂ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡಗಳು ರಾಜ್ಯ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ 19ನೇ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಶನಿವಾರದ ಪಂದ್ಯದಲ್ಲಿ ಗೆಲುವು ಸಾಧಿಸಿದವು.ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಂಇಜಿ 3-2 ಸೆಟ್‌ಗಳಿಂದ (22-25, 25-13, 23-25, 25-13, 15-11) ಎಸ್‌ಡಬ್ಲ್ಯುಆರ್ ತಂಡವನ್ನು ಮಣಿಸಿತು. ದಿನದ ಕೊನೆಯ ಪಂದ್ಯದಲ್ಲಿ ಪೊಲೀಸ್ ತಂಡ 3-1ರಲ್ಲಿ (25-20, 25-20, 21-25, 25-22) ಭಾರತ ಜೀವ ವಿಮಾ ನಿಗಮ (ಎಲ್‌ಐಸಿ) ಎದುರು ಜಯ ಪಡೆಯಿತು. ಭಾರತಕ್ಕೆ ಆರನೇ ಸ್ಥಾನ: ಭಾರತ ತಂಡ ಚೀನಾದ ಚೆಂಗ್ಡುವಿನಲ್ಲಿ ನಡೆದ 9ನೇ ಏಷ್ಯನ್ ಯೂತ್ ಬಾಲಕಿಯರ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಸ್ಥಾನ ಪಡೆಯಿತು.ಬ್ಯಾಸ್ಕೆಟ್‌ಬಾಲ್: ಎಂಇಜಿಗೆ ಜಯ

ಬೆಂಗಳೂರು: ಎಂಇಜಿ ತಂಡದವರು ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ಲೀಗ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಂಇಜಿ 41-17 ಪಾಯಿಂಟ್‌ಗಳಿಂದ ಕೋರಮಂಗಲ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಎಎಸ್‌ಸಿ 37-15ರಲ್ಲಿ ವಿಬಿಸಿ ಮಂಡ್ಯ ತಂಡವನ್ನು ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry