ಚುಟುಕು ಗುಟುಕು

7

ಚುಟುಕು ಗುಟುಕು

Published:
Updated:

ಹಾಕಿ: ಭಾರತ-ಜರ್ಮನಿ ಇಂದು ಪೈಪೋಟಿ

ಮೆಲ್ಬರ್ನ್ (ಪಿಟಿಐ): ಹಿಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದು ವಿಶ್ವಾಸದಿಂದ ಬೀಗುತ್ತಿರುವ ಭಾರತ ತಂಡ ಮಂಗಳವಾರ ಇಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಪಂದ್ಯದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಬಲಿಷ್ಠ ಜರ್ಮನಿ ತಂಡವನ್ನು ಎದುರಿಸಲಿದೆ.

ಕೆವಿಎಲ್: ಎಎಸ್‌ಸಿಗೆ ಅಗ್ರಸ್ಥಾನ

ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಎಎಸ್‌ಸಿ ತಂಡದವರು ಚೊಚ್ಚಲ ಕರ್ನಾಟಕ ವಾಲಿ ಲೀಗ್‌ನಲ್ಲಿ (ಕೆವಿಎಲ್) ಪ್ರಥಮ ಸ್ಥಾನ ಪಡೆದು 25,000 ರೂಪಾಯಿ ಬಹುಮಾನ ತಮ್ಮದಾಗಿಸಿಕೊಂಡರು.

ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ತಂಡ ಸೋಮವಾರದ ಪಂದ್ಯದಲ್ಲಿ 3-1ರಲ್ಲಿ ಡಿವೈಎಸ್‌ಎಸ್ ತಂಡವನ್ನು ಸೋಲಿಸಿತು. ಇದರಿಂದ ಎಂಇಜಿ ದ್ವಿತೀಯ ಸ್ಥಾನ ಗಳಿಸಿ 20,000 ರೂ. ಬಹುಮಾನ ಪಡೆಯಿತು.

ಮಲ್ಲೇಶ್ವರದ ಕೋದಂಡರಾಮಪುರ ಮೈದಾನದಲ್ಲಿ ಇತರ ಪಂದ್ಯಗಳಲ್ಲಿ ಭಾರತೀಯ ಜೀವ ವಿಮಾ ನಿಗಮ 3-1ರಲ್ಲಿ ಕರ್ನಾಟಕ ಪೊಲೀಸ್ ತಂಡವನ್ನು ಮಣಿಸಿತು. ಭಾರತ ಸಂಚಾರ ನಿಗಮ ನಿಯಮಿತ ತಂಡವು 3-2ರಲ್ಲಿ ಎಎಸ್‌ಸಿ ವಿರುದ್ಧ ಜಯ ಸಾಧಿಸಿತು.

ರಾಜ್ಯ ಲೀಗ್ ಬಾಲ್‌ಬ್ಯಾಡ್ಮಿಂಟನ್

ಬೆಂಗಳೂರು: ಐಟಿಐ ಸ್ಪೋಟ್ಸ್ ಕ್ಲಬ್ ಮತ್ತು ಬೆಂಗಳೂರು ಜಿಲ್ಲಾ ಬಾಲ್‌ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ಡಿಸೆಂಬರ್ 8 ಹಾಗೂ 9 ರಂದು ಬೆಂಗಳೂರಿನಲ್ಲಿ ರಾಜ್ಯ ಬಾಲ್‌ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‌ಷಿಪ್ ನಡೆಯಲಿದೆ.

ಲೀಗ್‌ನ ಪುರುಷ ಮತ್ತು ಮಹಿಳೆಯರ ವಿಭಾಗದ ಪಂದ್ಯಗಳು ದೂರವಾಣಿನಗರದ ಐಟಿಐ ಮೈದಾನದಲ್ಲಿ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ ಮೊಬೈಲ್ ಫೋನ್ ಸಂಖ್ಯೆ 9845299009ರಲ್ಲಿ ಸಂಘಟಕರನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry