ಚುಟುಕು ಗುಟುಕು

7

ಚುಟುಕು ಗುಟುಕು

Published:
Updated:

ಕ್ರಿಕೆಟ್: ಭರತ್ ಕೊಂಡಜ್ಜಿಗೆ ಐದು ವಿಕೆಟ್

ಬೆಂಗಳೂರು: ಭರತ್ ಕೊಂಡಜ್ಜಿ (15ಕ್ಕೆ5) ಹಾಗೂ ಶೇಖರ್ (17ಕ್ಕೆ4) ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಮರ್ಚೆಂಟ್ಸ್ ಕ್ರಿಕೆಟ್ ಕ್ಲಬ್ (1) ತಂಡವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮೊದಲ ಗುಂಪಿನ ನಾಲ್ಕನೇ ಡಿವಿಷನ್ ಲೀಗ್ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದಿಂದ ಕೋಲಾರದ ಯಂಗ್ ಬಾಯ್ಸ ವಿರುದ್ಧ ವಿಜಯ ಸಾಧಿಸಿತು.ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯಂಗ್ ಬಾಯ್ಸ ತಂಡ 22.5 ಓವರುಗಳಲ್ಲಿ ಕೇವಲ 68 ರನ್ ಗಳಿಸಿ ಆಲ್‌ಔಟ್ ಆಯಿತು. ಗೆಲುವಿನ ಗುರಿಯನ್ನು ಬೆನ್ನಟ್ಟಿದ ಮರ್ಚೆಂಟ್ಸ್ 10.1 ಓವರುಗಳಲ್ಲಿ 2 ವಿಕೆಟ್ ಮಾತ್ರ ಕಳೆದುಕೊಂಡು 69 ರನ್ ಗಳಿಸಿತು.ಸಂಕ್ಷಿಪ್ತ ಸ್ಕೋರ್: ಕೋಲಾರದ ಯಂಗ್ ಬಾಯ್ಸ: 22.5 ಓವರುಗಳಲ್ಲಿ 68 (ಬಿ. ಶಿವಕುಮಾರ್ 29; ಭರತ್ ಕೊಂಡಜ್ಜಿ 15ಕ್ಕೆ5, ಶೇಖರ್ 17ಕ್ಕೆ4); ಮರ್ಚೆಂಟ್ಸ್ ಕ್ರಿಕೆಟ್ ಕ್ಲಬ್ (1): 10.2 ಓವರುಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 69 (ತೋಷ್ ಔಟಾಗದೆ 26, ಕೆ.ಎಸ್.ಟಿ. ಸಾಯಿ ಔಟಾಗದೆ 36).ಕ್ರಿಕೆಟ್: ಫೈನಲ್‌ಗೆ ಭಾರತ ರೆಡ್ ತಂಡ

ನಾಗಪುರ (ಪಿಟಿಐ):
ಯೂಸುಫ್ ಪಠಾಣ್ (25ಕ್ಕೆ4) ಅವರ ಪ್ರಭಾವಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ರೆಡ್ ತಂಡದವರು ಎನ್.ಕೆ.ಪಿ. ಸಾಳ್ವೆ ಚಾಲೆಂಜರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಭಾರತ ಗ್ರೀನ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಫೈನಲ್ ತಲುಪಿದ್ದಾರೆ.ಭಾರತ ಗ್ರೀನ್ ತಂಡವು 37.5 ಓವರುಗಳಲ್ಲಿ 170 ರನ್ ಗಳಿಸಿತು. ಆದರೆ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದ ಕಾರಣ ಡಕ್ವರ್ತ್ ಲೂಯಿಸ್ ನಿಯಮ ಅಳವಡಿಸಲಾಯಿತು. ಈ ನಿಯಮದ ಪ್ರಕಾರ ರೆಡ್ ತಂಡಕ್ಕೆ 42 ಓವರ್‌ಗಳಲ್ಲಿ 152 ರನ್ ಗಳಿಸುವ ಗುರಿ ನೀಡಲಾಯಿತು. ಈ ಮೊತ್ತವನ್ನು ಗಂಭೀರ್ ಪಡೆ 29 ಓವರುಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು.ಸಂಕ್ಷಿಪ್ತ ಸ್ಕೋರ್: ಭಾರತ ಗ್ರೀನ್: 37.5 ಓವರುಗಳಲ್ಲಿ 170 (ರಾಬಿನ್ ಉತ್ತಪ್ಪ 56, ಶ್ರೀಕಾಂತ್ ಅನಿರುಧ್ 37, ಮೊಹಮ್ಮದ್ ಕೈಫ್ 29, ಮುರಳೀಧರನ್ ಗೌತಮ್ 19, ಅಭಿಮನ್ಯು ಮಿಥುನ್ 10; ಯೂಸುಫ್ ಪಠಾಣ್ 25ಕ್ಕೆ4); ಭಾರತ ರೆಡ್: 29 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 152 (ಅಭಿನವ್ ಮುಕುಂದ್ 61, ಗೌತಮ್ ಗಂಭೀರ್ 57). ಫಲಿತಾಂಶ: ಭಾರತ ರೆಡ್‌ಗೆ 8 ವಿಕೆಟ್ ಜಯ.ಮುಂಬೈ ಇಂಡಿಯನ್ಸ್‌ಗೆ ಅಪಾರ ಅಭಿಮಾನಿಗಳು!

ಕೋಲ್ಕತ್ತ (ಪಿಟಿಐ):
ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸುವ ಮೂಲಕ ನಂಬರ್-1 ಸ್ಥಾನವನ್ನು ಗಿಟ್ಟಿಸಿಕೊಂಡಿದೆ.ಐಪಿಎಲ್ ಫ್ರಾಂಚೈಸಿಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಫೇಸ್‌ಬುಕ್‌ನಲ್ಲಿ ಗಳಿಸಿರುವ ಇಂಡಿಯನ್ಸ್ ವಿಶಿಷ್ಟ ಗೌರವ ಪಡೆದುಕೊಂಡಿದೆ. ಈಗಾಗಲೇ 22 ಲಕ್ಷ ಜನರು ಈ ತಂಡದ ಅಭಿಮಾನಿಗಳಾಗಿ ನೋಂದಾಯಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry